ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಕ್ಕೆ ಚಾಲನೆ

4:39 PM, Wednesday, October 10th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mangaladeviಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಅಕ್ಟೊಬರ್ 10 ನೇ ಬುಧವಾರದಿಂದ ಅಕ್ಟೊಬರ್  20 ನೇ ಶನಿವಾರದವರೆಗೆ ನಡೆಯಲಿರುವ ನವರಾತ್ರಿ ಮಹೋತ್ಸವಕ್ಕೆ ಬುಧವಾರ ಬೆಳಗ್ಗೆ 9.೦೦ ಕ್ಕೆ ಗಣಪತಿ ಪ್ರಾರ್ಥನೆಯೊಂದಿಗೆ ನವರಾತ್ರಿ ಉತ್ಸವವಕ್ಕೆ ಶ್ರೀ ರಾಮಕೃಷ್ಣಯಾಜಿ ನಿವೃತ್ತ ಪ್ರಾದ್ಯಾಪಕರು ಎನ್. ಐ.ಟಿ  ಕೆ ಸುರತ್ಕಲ್ ಇವರು ಚಾಲನೆ ನೀಡಿದರು.

ಈ ಸಂದರ್ಭ ಮುಳಿಹಿತ್ಲು ಗೇಮ್ಸ್ ಟೀಮ್ ಇದರ ಹುಲಿವೇಷದ ಸುವರ್ಣ ಮಹೋತ್ಸವದ ಪ್ರಯುಕ್ತ ಧ್ವಜ ಸ್ತ೦ಭದ ಪೀಠಕ್ಕೆ ಬೆಳ್ಳಿ ಮತ್ತು ಪಂಚಲೋಹದ ಹೊದಿಕೆ ಸಮರ್ಪಣೆ ಮಾಡಿದರು.

ಮಂಗಳಾದೇವಿ ದೇವಸ್ಥಾನದಲ್ಲಿಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಅಕ್ಟೊಬರ್ 19  ರಂದು ವಿಜಯ ದಶಮಿ (ವಿದ್ಯಾರಂಭ ) ಮಧ್ಯಾಹ್ನ ರಥಾರೋಹಣ ರಾತ್ರಿ ಗಂಟೆ 7.30ಕ್ಕೆ ರಥೋತ್ಸವ . ಅಕ್ಟೊಬರ್  20 ರಂದು  ಅವಭ್ರತ ಮಂಗಳ ಸ್ನಾನ (ಜಳಕ ) ನಡೆಯಲಿದೆ. ಅಕ್ಟೊಬರ್ 21  ರಂದು ಸಂಪ್ರೋಕ್ಷಣೆ, ಸಾಯಂಕಾಲ ಗಂಟೆ 6.30ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.

mangaladevi-5

mangaladevi-2

mangaladevi-4

mangaladevi-3

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English