ಮಾಟ-ಮಂತ್ರಕ್ಕೆ ಬಳಸಿದ್ದ ತೆಂಗಿನಕಾಯಿ, ಬಾಳೆಹಣ್ಣು ತಿಂದು ಯುವಕರ ಚಾಲೆಂಜ್..!

1:04 PM, Saturday, October 13th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

belagaviಬೆಳಗಾವಿ: ಮಾಟ-ಮಂತ್ರಕ್ಕೆ ಬಳಸಿದ್ದ ತೆಂಗಿನಕಾಯಿ, ಬಾಳೆಹಣ್ಣು ಸೇವಿಸುವ ಮೂಲಕ ಬೆಳಗಾವಿಯ ಈ ಯುವಕರು ಮೌಢ್ಯಕ್ಕೆ ಸೆಡ್ಡು ಹೊಡೆದು ಗಮನ ಸೆಳೆದಿದ್ದಾರೆ.

ಖಾನಾಪುರ ಪಟ್ಟಣದ ಯುವಕರು ಇಂದು ಬೆಳಗ್ಗೆ ವಾಯು ವಿಹಾರಕ್ಕೆ ಹೋದಾಗ ಕಣ್ಣಿಗೆ ಕಂಡಿರುವ ಮಾಟ-ಮಂತ್ರಕ್ಕೆ ಬಳಸಿದ್ದ ಬಾಳೆ ಹಣ್ಣು, ತೆಂಗಿನಕಾಯಿ ಸೇವಿಸಿದ್ದಾರೆ.

ನಿನ್ನೆ ಮಹಾನವಮಿ ಅಮವಾಸ್ಯೆ ಆದ ಕಾರಣ ಖಾನಾಪುರ ಪಟ್ಟಣದ ನಿಟ್ಟೂರು ಕ್ರಾಸ್ ಬಳಿ ಮಾಟ-ಮಂತ್ರ ಮಾಡಿಸಲಾಗಿತ್ತು. ಮಾಟ-ಮಂತ್ರಕ್ಕೆ ತೆಂಗು, ಬಾಳೆಹಣ್ಣು, ಗಡಿಗೆ, ನಿಂಬೆಹಣ್ಣು ಸೇರಿದಂತೆ ಇನ್ನಿತರ ವಸ್ತು ಬಳಸಿದ್ದರು. ಮಾಟಕ್ಕೆ ಬಳಸಿದ್ದ ಬಾಳೆ, ತೆಂಗು ಸೇವಿಸಿರುವ ಖಾನಾಪುರದ ಯುವಕರು ಮಾಟ-ಮಂತ್ರದಂತ ಮೌಢ್ಯಗಳಿಂದ ಹೊರಬರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English