ಮಂಡ್ಯ: ಸಾಲಬಾಧೆ ತಾಳಲಾರದೆ ಜೆಡಿಎಸ್ ಮುಖಂಡ ಹಾಗೂ ಉದ್ಯಮಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸ್ವರ್ಣಸಂದ್ರ ಫ್ಯಾಕ್ಟರಿ ವೃತ್ತದಲ್ಲಿ ನಡೆದಿದೆ.
ಚಿಕ್ಕೇಗೌಡನದೊಡ್ಡಿಯ ನಿವಾಸಿ ಲೋಕೇಶ್ (35) ಆತ್ಮಹತ್ಯೆಗೆ ಶರಣಾಗಿರುವ ಉದ್ಯಮಿ. ಲೋಕೇಶ್ ಮಹಿಂದ್ರಾ ಟ್ರ್ಯಾಕ್ಟರ್ ಶೋರೂಂ ನಡೆಸುತ್ತಿದ್ದರು. ಕಳೆದ ನಗರಸಭೆ ಚುನಾವಣೆಯಲ್ಲಿ 34 ನೇ ವಾರ್ಡ್ ನಿಂದ ಜೆಡಿಎಸ್ ಅಭ್ಯರ್ಥಿಯಗಿ ಸ್ಪರ್ಧಿಸಿ ಸೋಲನುಭವಿಸಿದ್ದರು.
ಲೋಕೇಶ್ ವ್ಯವಹಾರದ ಸಲುವಾಗಿ 5 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದು, ಆದ್ರೆ ವ್ಯವಹಾರದಲ್ಲಿ ನಷ್ಟ ಉಂಟಾಗಿ ಸಾವಿನ ಹಾದಿ ಹಿಡಿದಿದ್ದಾರೆ. ಸಾಲದ ಒತ್ತಡ ಹೆಚ್ಚಾಗಿದ್ರಿಂದ ರಾತ್ರಿ ಶೋರೂಂ ನಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Click this button or press Ctrl+G to toggle between Kannada and English