ಮೈಸೂರು: 74 ಕೆಜಿ ವಿಭಾಗದ ಅಂತಿಮ ಕುಸ್ತಿ ಪಂದ್ಯದಲ್ಲಿ ಪೈ.ವೆಂಕಟೇಶ್ ವಿರುದ್ಧ 5-0 ಅಂಕಗಳಿಂದ ಧಾರವಾಡದ ಪೈ.ಸದಾಶಿವ ನಾಲ್ವಡೆ ಜಯ ಪಡೆಯುವ ಮೂಲಕ ದಸರಾ ಕೇಸರಿ ಪ್ರಶಸ್ತಿಗೆ ಭಾಜನರಾದರು.
ದಸರಾ ಮಹೋತ್ಸವದ ಅಂಗವಾಗಿ ಐದು ದಿನಗಳಿಂದ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಯಲ್ಲಿ ಕೊನೆಯ ದಿನವಾದ ನಿನ್ನೆ ಮದಗಜಗಳಂತೆ ಕಾದಾಡಿದ ಕುಸ್ತಿಪಟುಗಳನ್ನು ನೋಡಿ ಕುಸ್ತಿ ಪ್ರಿಯರು ಸಂತಸಗೊಂಡರು. ಧಾರವಾಡದ ಪೈ.ಸದಾಶಿವ ಹಾಗೂ ಪೈ.ವೆಂಕಟೇಶ್ ವಿರುದ್ಧ ನಡೆದ ರೋಚಕ ಕ್ಷಣದಲ್ಲಿ ಸದಾಶಿವ ಗೆಲುವಿನ ನಗೆ ಬೀರಿದರು.
೫೭ ಕೆ.ಜಿ. ವಿಭಾಗದ ಮೈಸೂರು ವಿಭಾಗೀಯ ಮಟ್ಟದ ಅಂತಿಮ ಕುಸ್ತಿ ಪಂದ್ಯದಲ್ಲಿ ಮೈಸೂರಿನ ಕುಂಬಾರಕೊಪ್ಪಲಿನ ಪೈ.ಅರವಿಂದ ಠಾಕೂರ್ ೧೫-೪ ಅಂಕಗಳಿಂದ ರಮ್ಮನಹಳ್ಳಿ ಪೈ.ಚಂದ್ರು ವಿರುದ್ಧ ಜಯ ಪಡೆದು ದಸರಾ ಕುಮಾರಗೆ ಭಾಜನರಾದರು.
೫೭ ಕೆ.ಜಿ.ವಿಭಾಗದ ಪ್ರಶಸ್ತಿಯ ಅಂತಿಮ ಕುಸ್ತಿಯಲ್ಲಿ ಗದಗ್ನ ಶಾಹಿದ್ ಬೇಗಂ ೪-೧ ಅಂಕಗಳಿಂದ ಮೂಡಬಿದಿರೆಯ ಲಕ್ಷ್ಮೀ ವಿರುದ್ಧ ಜಯ ಪಡೆದು ದಸರಾ ಕಿಶೋರಿ ಟೈಟಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಮೇಯರ್ ಕಪ್ಗೆ ಪೈ.ಪ್ರವೀಣ ಹಾಗೂ ಸಾಹುಕಾರ್ ಚೆನ್ನಯ್ಯ ಕಪ್ಅನ್ನು ಪೈ.ಕೃಷ್ಣ ಪಡೆದರು.
Click this button or press Ctrl+G to toggle between Kannada and English