ಮಂಗಳೂರು: ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕಸಾಯಿಖಾನೆಯ ಸ್ವಚ್ಛತ ಮತ್ತು ಅಭಿವೃದ್ಧಿಗೆ ಹೋಲಿಸುವ ಸಂಬಂಧ ನೀಡಿರುವ ಸಲಹೆ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರಧಾನಮಂತ್ರಿ ಮತ್ತು ಅರ್ಬನ್ ಡೆವಲಪ್ಮೆಂಟ್ ಸಚಿವರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಸ್ವಚ್ಛತೆ ಅಭಿವೃದ್ಧಿಗೆ ಉತ್ತಮವಾದ ಆಹಾರ ಜನರಿಗೆ ಸಿಗಬೇಕೆಂದು ಈ ಪ್ರಪೋಸಲ್ ಅನ್ನು ಸ್ಮಾರ್ಟ್ ಸಿಟಿ ಸಮಿತಿಯ ಮುಂದೆ ಇಟ್ಟಿದ್ದೆ. ಆದರೆ ಈ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಡೆಯುತ್ತಿರುವ ಆರೋಪ-ಪ್ರತ್ಯಾರೋಪ ನನಗೆ ಬೇಸರ ತಂದಿದೆ ಎಂದರು.
ಈ ವಿಚಾರದಲ್ಲಿ ಜನರ ಮಧ್ಯೆ ಗೊಂದಲ ಆಗುವುದು ಬೇಡ. ಇದಕ್ಕಾಗಿ ಪ್ರಧಾನಮಂತ್ರಿ ಮತ್ತು ಅರ್ಬನ್ ಡೆವಲಪ್ಮೆಂಟ್ ಸಚಿವರಿಗೆ ಪತ್ರ ಬರೆಯುತ್ತಿದ್ದೇನೆ. ಇದನ್ನು ಯಾಕಾಗಿ ಪ್ರಸ್ತಾವ ಮಾಡಲಾಗಿದೆ ಎಂಬುದನ್ನು ಅಲ್ಲಿ ತಿಳಿಸಿದ್ದೇನೆ . ಅದೇ ರೀತಿ ಸಾರ್ವಜನಿಕರು ಸ್ಮಾರ್ಟ್ ಸಿಟಿ ಯೋಜನೆಗೆ ವಿನಂತಿಸಿದ್ದಾರೆ . ಅದಕ್ಕೆ ಅನುಮತಿ ಕೊಡಿ ಎಂದು ಕೇಳಿದ್ದೇನೆ ಎಂದು ತಿಳಿಸಿದರು.
ಇತ್ತೀಚೆಗೆ ಕಸಾಯಿಖಾನೆ ವಿವಾದಕ್ಕೆ ಸಂಬಂಧಿಸಿದಂತೆ ನಡೆದಿದ್ದ ಪ್ರತಿಭಟನೆಯಲ್ಲಿ ಯು ಟಿ ಖಾದರ್ ಅವರು ಗೋಮೂತ್ರ ಸೇವಿಸಿದರೆ ಹುಷಾರಾಗುತ್ತಾರೆ ಎಂದಿದ್ದ ದುರ್ಗಾವಾಹಿನಿ ಮುಖಂಡೆ ವಿದ್ಯಾ ಮಲ್ಯಗೆ ವ್ಯಂಗ್ಯದ ಉತ್ತರ ನೀಡಿದ್ದಾರೆ ಸಚಿವ ಖಾದರ್.
ಸಹೋದರಿ ನೀಡಿರುವ ಸಲಹೆಗೆ ಧನ್ಯವಾದಗಳು. ಅವರು ತೆಗೆದುಕೊಳ್ಳುವ ಔಷಧಿಯನ್ನು ನನಗೆ ತೆಗೆದುಕೊಳ್ಳಲು ಹೇಳಿದ್ದಾರೆ. ಆದರೆ ನಾನೀಗ ಸಂಪೂರ್ಣ ಸಸ್ಯಹಾರಿ ಆಗಿದ್ದೇನೆ. ಅವರ ಕಾಳಜಿಗೆ ಧನ್ಯವಾದಗಳು ಎಂದು ಗೋಮೂತ್ರ ಸಲಹೆ ನೀಡಿದ ವಿದ್ಯಾ ಮಲ್ಯಗೆ ಟಾಂಗ್ ನೀಡಿದರು.
Click this button or press Ctrl+G to toggle between Kannada and English