ಬೆಂಗಳೂರು: ಇತ್ತೀಚೆಗೆ ಬೆಳೆಬಾಳುವ ವಸ್ತುಗಳು ಸಿಕ್ಕಿದ್ರೆ ಸಾಕು ಅದನ್ನು ಯಾರಿಗು ತಿಳಿಸದೇ ತಮ್ಮ ಜೇಬಿಗೆ ಹಾಕೋರೆ ಹೆಚ್ಚು. ಆದ್ರೆ ಇಲ್ಲೋರ್ವ ಯುವಕ ತನ್ನ ಪ್ರಾಮಾಣಿಕತೆಯಿಂದ ಪೊಲೀಸರು ಹಾಗೂ ಸಾರ್ವಜನಿಕರ ಮೆಚ್ಚುಗೆ ಪಡೆದಿದ್ದಾನೆ.
ಹೌದು.., ಚಂದ್ರಕುಮಾರ್ ಎಂಬಾತ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ತನಗೆ ಸಿಕ್ಕಿದ್ದ ಸುಮಾರು 60 ಸಾವಿರ ರೂ. ಬೆಲೆಬಾಳುವ ಐಫೋನ್ ಮೊಬೈಲನ್ನು ಉಪ್ಪಾರಪೇಟೆ ಠಾಣೆಗೆ ತಂದು ಕೊಟ್ಟಿದ್ದಾನೆ.
ಇನ್ನು ಈತನ ಪ್ರಾಮಾಣಿಕತೆ, ದಕ್ಷತೆಗೆ ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ ಚೆನ್ನಣ್ಣನವರ ಮೆಚ್ಚಿ ಗೌರವ ಪತ್ರದೊಂದಿಗೆ ಸನ್ಮಾನಿಸಿದ್ದಾರೆ. ಇದೊಂದು ಸಾರ್ವಜನಿಕರಿಗೆ ಒಳ್ಳೆ ಸಂದೇಶ ಅನ್ನೋದನ್ನು ಕೂಡ ಅವರು ಹೇಳಿದ್ದಾರೆ.
ಇದೀಗ ಚಂದ್ರಕುಮಾರ್ ಕೆಲಸಕ್ಕೆ ಸಾರ್ವಜನಿಕ ವಲಯದಿಂದಲೂ ಪ್ರಶಂಸೆ ವ್ಯಕ್ತವಾಗ್ತಿದೆ.
Click this button or press Ctrl+G to toggle between Kannada and English