ನವದೆಹಲಿ: ಭಾರತದ ಟಾಪ್ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧುಗೆ ಸದ್ಯ ಟೈಮ್ ಸರಿಯಿಲ್ಲ. ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ಸಿಂಧು ಸದ್ಯ ಎಲ್ಲಾ ಪಂದ್ಯಗಳಲ್ಲೂ ಊಹಿಸದ ಶಾಕ್ಗಳಿಗೆ ಒಳಗಾಗುತ್ತಿದ್ದಾರೆ.
ಏಷ್ಯನ್ ಗೇಮ್ಸ್ ನಂತರ ಪಿ ವಿ ಸಿಂಧು ಪ್ರದರ್ಶನ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಆಡುತ್ತಿರುವ ಪ್ರತೀ ಪಂದ್ಯಗಳಲ್ಲೂ ಆರಂಭದಲ್ಲೇ ಸೋತು ಟೂರ್ನಿಯಿಂದ ಹೊರ ಬೀಳುತ್ತಿದ್ದಾರೆ. ಪ್ರಸ್ತುತ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಸಿಂಧು ಇಂದು ನಡೆದ ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದಾರೆ.
ಈ ಟೂರ್ನಿಯ ಮೊದಲ ಸುತ್ತಿನಲ್ಲೇ ಅಮೆರಿಕನ್ ಬ್ಯಾಡ್ಮಿಂಟನ್ ಆಟಗಾರ್ತಿ ಬಿವೆನ್ ಜಂಗ್ ವಿರುದ್ಧ ಸೋಲಿಗೆ ಶರಣಾಗಿದ್ದಾರೆ. 3ನೇ ಶ್ರೇಯಾಂಕಿತೆಯಾಗಿ ಕಣಕ್ಕಿಳಿದ ಸಿಂಧು ಈ ಪಂದ್ಯದಲ್ಲಿ 17-21, 21-16, 18-21, ಅಂತರದಿಂದ ಪರಾಭವಗೊಂಡಿದ್ದಾರೆ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಪಂದ್ಯದಲ್ಲಿ ಸಿಂಧು ಮೇಲುಗೈ ಸಾಧಿಸಲು ಸಾಧ್ಯವಾಗಲೇ ಇಲ್ಲ.
ಇನ್ನೂ ಜಂಗ್ ವಿರುದ್ಧ ಸಿಂಧು ಸೋಲುತ್ತಿರುವುದು ಇದು ಮೂರನೇ ಸರಿ, ಈ ವರ್ಷ ಫೆಬ್ರವರಿಯಲ್ಲಿ ಇಂಡಿಯನ್ ಓಪನ್ ಫೈನಲ್ನಲ್ಲೂ ಅಮೆರಿಕನ್ ಆಟಗಾರ್ತಿ ಮೇಲುಗೈ ಸಾಧಿಸಿದ್ರು. ಟಾಪ್ ಆಟಗಾರ್ತಿಯಾಗಿ ಮೈದಾನಕ್ಕೆ ಇಳಿದ್ರು ಸಹ ಸಿಂಧು ಮೊದಲಿನ ರೀತಿ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಖಚಿತವಾಗಿ ಪದಕ ಬರುತ್ತೆ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ಸಿಂಧು ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.
Click this button or press Ctrl+G to toggle between Kannada and English