ಕಳಂಕಿತ ಸದಸ್ಯರನ್ನು ಕೂಡಲೇ ಆಮಾನತುಗೊಳಿಸಿ : ವೀರಪ್ಪ ಮೊಯಿಲಿ

1:22 PM, Thursday, February 9th, 2012
Share
1 Star2 Stars3 Stars4 Stars5 Stars
(4 rating, 1 votes)
Loading...

veerappa moily

ಮಂಗಳೂರು: ಕೇಂದ್ರ ಕಾರ್ಪೊರೇಟ್‌ ವ್ಯವಹಾರಗಳ ಸಚಿವ ಡಾ| ಎಂ. ವೀರಪ್ಪ ಮೊಯಿಲಿ ಅವರು ವಿಧಾನಸಭೆಯಲ್ಲಿ ಬ್ಲೂಫಿಲ್ಮ್ ವೀಕ್ಷಿಸಿದ ಸದಸ್ಯರನ್ನು ಆಮಾನತುಗೊಳಿಸಬೇಕು ಹಾಗೂ ಸೈಬರ್‌ ಕಾನೂನು ಉಲ್ಲಂಘನೆ ಪ್ರಕರಣದಲ್ಲಿ ಕೂಡಲೇ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವಿಷಯದ ಕುರಿತು ಬುಧವಾರ ಮಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತತ್‌ಕ್ಷಣ ಕ್ರಮಕೈಗೊಳ್ಳಲು ಬಿಜೆಪಿ ನಿರಾಕರಿಸುತ್ತಿರುವುದು ಮತ್ತು ಅವರ ಬೆಂಬಲಕ್ಕೆ ನಿಂತಿರುವುದು ದುರದೃಷ್ಟಕರ ಎಂದು ಹೇಳಿದರು.

ಈ ಘಟನೆ ಖಂಡನೀಯ. ಸದನದ ಪಾವಿತ್ರ್ಯವನ್ನು ಕಾಪಾಡಬೇಕಾದ ಜನಪ್ರತಿನಿಧಿಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಚಾರ. ಸಾರ್ವಜನಿಕ ಜೀವನದಲ್ಲಿ ಇಂತಹ ಇಂಥ ನಾಚಿಗೇಡಿನ ಕೆಲಸ ಮಾಡುವುದು ಸಮಂಜಸವಲ್ಲ ಎಂದರು. ಬಿಜಿಪಿ ಸದಸ್ಯರ ಈ ಧೊರಣೆ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ತಲೆತಗ್ಗಿಸುವಂತೆ ಮಾಡಿದೆ. ಬರ ಪರಿಸ್ಥಿತಿ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿರುವಾಗ ಮೋಜು ಅನುಭವಿಸುತ್ತಿದ್ದುದು ಬೇಜಾಬ್ದಾರಿತನದ ಪರಮಾವಧಿಯಾಗಿದೆ. ಇದು ಬಿಜೆಪಿಗೆ ಮಾತ್ರ ಅವಮಾನವಲ್ಲ. ರಾಜ್ಯ, ರಾಜಕಾರಣಕ್ಕೆ ಮಾಡಿರುವ ಅವಮಾನ ಎಂದರು.

ಬಿಜೆಪಿ ಈ ಪ್ರಕರಣಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು. ಪಕ್ಷದ ಘನತೆ, ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಮತ್ತು ಸಾರ್ವಜನಿಕ ಜೀವನದಲ್ಲಿ ನೈತಿಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅನೀತಿಯಾಗಿ ನಡೆದುಕೊಂಡ ಸದಸ್ಯರ ವಿರುದ್ದ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಕರ್ನಾಟಕ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ವಿಧಾನಸಭಾ ಅಧ್ಯಕ್ಷರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಸದನದ ಗೌರವವನ್ನು ಎತ್ತಿ ಹಿಡಿಯಬೇಕು ಎಂದವರು ಹೇಳಿದರು.

image description

Comments are closed.