ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮಂಗಳೂರಿನ ದಸರಾ ಶೋಭಾಯಾತ್ರೆ.!

10:15 AM, Saturday, October 20th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Mangaluru-dasara-14ಮಂಗಳೂರು: ದಸರಾದ ವೈಭವದ ಶೋಭಾಯಾತ್ರೆಗೆ ನಿನ್ನೆ ಸಂಜೆ 4 ಗಂಟೆಗೆ ಚಾಲನೆ ನೀಡುವ ಮೂಲಕ ಮಂಗಳೂರು ದಸರಾದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಮೊದಲಿಗೆ ಶ್ರೀ ಮಹಾಗಣಪತಿ ದೇವರಿಗೆ ಪೂಜೆ ಮಾಡಿ, ಗಣಪತಿ ದೇವರ ವಿಗ್ರಹವನ್ನು ಮೆರವಣಿಗೆಯ ವಾಹನದಲ್ಲಿ ಕುಳ್ಳಿರಿಸಲಾಯಿತು. ಬಳಿಕ ನವದುರ್ಗೆಯರಾದ ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಗೌರಿ, ಮಹಾಕಾಳಿ, ಸಿದ್ಧಿದಾತ್ರಿ ಹಾಗೂ ಶಾರದಾ ಮಾತೆಯ ಪೂಜೆಯ ಬಳಿಕ ವಿಗ್ರಹಗಳನ್ನು ಮೆರವಣಿಗೆಯ ವಾಹನದಲ್ಲಿ ಕುಳ್ಳಿರಿಸಿ, ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

Mangaluru-dasara-15ಸುಮಾರು 75 ಸ್ತಬ್ಧಚಿತ್ರಗಳು, 100ಕ್ಕೂ ಅಧಿಕ ಕಲಾ ತಂಡಗಳು, 20ಕ್ಕೂ ಹೆಚ್ಚಿನ ಹುಲಿವೇಷ ತಂಡಗಳು ಶಾರಾದ ಮಾತೆಯ ವೈಭವದ ಶೋಭಾಯಾತ್ರೆಗೆ ಮೆರುಗು ನೀಡಿದವು.ಶೋಭಾಯಾತ್ರೆಯು ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಿಂದ ಮುಂದುವರಿದು, ಮಣ್ಣಗುಡ್ಡೆ ಮಾರ್ಗವಾಗಿ ಲೇಡಿಹಿಲ್ ವೃತ್ತದಿಂದ ಸಾಗಿ ಲಾಲ್ಬಾಗ್, ಎಂ.ಜಿ. ರೋಡ್, ನವಭಾರತ್ ಸರ್ಕಲ್ ಮಾರ್ಗದಿಂದ ಸಾಗಿ ಬಳಿಕ ಬಿ.ಎಂ.ಹೈಸ್ಕೂಲ್ ಮಾರ್ಗವಾಗಿ ಅಳಕೆಯಿಂದ ಪುನಃ ಕುದ್ರೋಳಿ ಶ್ರೀ ಕ್ಷೇತ್ರಕ್ಕೆ ಬರಲಿದೆ.

ಈ ಸಂದರ್ಭ ದಸರಾ ಸಂಪನ್ನ ಪೂಜೆಯ ಬಳಿಕ ದೇವಳದ ಕಲ್ಯಾಣಿಯಲ್ಲಿ ಶ್ರೀ ಮಹಾಗಣಪತಿ ದೇವರು, ನವದುರ್ಗೆಯರು ಹಾಗೂ ಶ್ರೀ ಶಾರದಾಮಾತೆಯ ವಿಗ್ರಹಗಳನ್ನು ಜಲಸ್ತಂಭನ ಮಾಡುವುದರೊಂದಿಗೆ ಮಂಗಳೂರು ದಸರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

Mangaluru-dasara

Mangaluru-dasara-2

Mangaluru-dasara-3

Mangaluru-dasara-4

Mangaluru-dasara-5

Mangaluru-dasara-6

Mangaluru-dasara-7

Mangaluru-dasara-8

Mangaluru-dasara-9

Mangaluru-dasara-10

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English