ಬೆಳ್ತಂಗಡಿ: ಇಂದುಬೆಟ್ಟು ಗ್ರಾಮದ ಪುತ್ರಬೆಟ್ಟು ನಿವಾಸಿ ಸಂಜೀವ ಗೌಡ ಅವರ ಪುತ್ರ ಪ್ರತೀಕ್(19) ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಊಟ ಮುಗಿಸಿಕೊಂಡು ಬಳಿಕ ಸ್ನೇಹಿತರ ಜತೆ ತೋಟದ ಕಡೆಗೆ ತಿರುಗಾಡಿ ಕೊಂಡು ಹೋಗಿ ನಾಪತ್ತೆಯಾಗಿದ್ದರು.
ಸ್ನೇಹಿತರ ಜೊತೆ ತೆರಳಿದ ಪ್ರತೀಕ್ ಅವರು ನಾಪತ್ತೆ ಯಾಗಿರುವುದು ಸಂಶಯಕ್ಕೆ ಕಾರಣವಾಗಿದ್ದು ಜೊತಗಿದ್ದ ಸ್ನೇಹಿತರು ಪೊಲೀಸರಿಗೆ ಯಾವುದೇ ಮಾಹಿತಿ ನೀಡಲಿಲ್ಲ. ಶುಕ್ರವಾರ ಅಗ್ನಿಶಾಮಕ ದಳ ಮತ್ತು ಈಜು ತಜ್ಞರು ನದಿಯಲ್ಲಿ ಹುಡುಕಾಟ ಮಾಡಿದರು ಪ್ರತೀಕ್ ಶವ ಪತ್ತೆ ಯಾಗಿರಲಿಲ್ಲ.
ಶನಿವಾರ ಬೆಳಿಗ್ಗೆ ಪ್ರತೀಕ್ ಮೃತ ಶರೀರ ಪತ್ತೆಯಾಗಿದ್ದು ಬೆಳ್ತಂಗಡಿಯ ಈಜುತಜ್ಞ ಎಸ್ ಡಿ ಪಿ ಐ ಬೆಳ್ತಂಗಡಿ ನಗರ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ಸಂಜಯನಗರ ಹಾಗೂ ಎಸ್ ಡಿ ಪಿ ಐ ಕಾರ್ಯಕರ್ತ ಶಿಹಾಬ್ ಕುಂಟಿನಿ ಅವರು ಪ್ರತೀಕ್ ಮೃತ ಶರೀರವನ್ನು ಕಿಲ್ಲೂರು ನೇತ್ರಾವತಿ ನದಿಯಿಂದ ಮೇಲಕ್ಕೆತ್ತಿದ್ದಾರೆ.
Click this button or press Ctrl+G to toggle between Kannada and English