ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತದ ಬಜರಂಗ್​

11:24 AM, Monday, October 22nd, 2018
Share
1 Star2 Stars3 Stars4 Stars5 Stars
(No Ratings Yet)
Loading...

indianಬುಡಾಪೇಸ್ಟ್: ಇಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಭಾರತದ ಕುವರ ಬಜರಂಗ್ ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾರೆ.

ಭಾರತದ ಬಜರಂಗ್ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಪುರುಷರ 65 ಕೆಜಿ ವಿಭಾಗದಲ್ಲಿ ಬಜರಂಗ್ ಕ್ಯೂಬಾದ ಅಲೆಂಜಾಡ್ರೊ ಎನ್ರಿಕ್ ವಾಲ್ಡಸ್ ಟೂಬಿಯರ್ ವಿರುದ್ಧ ಸೆಣಸಾಡಿದ್ದಾರೆ. ಬಿರುಸಿನ ಪೈಪೋಟಿ ಮಧ್ಯೆ ಬಜರಂಗ್ 3-4 ಅಂತರದಿಂದ ಗೆದ್ದಿದ್ದರು. ಎಂಟರ್ ಘಟ್ಟದಲ್ಲಿ ಬಜರಂಗ್ 5-5ರಿಂದ ಮಂಗೋಲಿಯಾದ ಟಲ್ಗಾ ತುಮುರ್ ಒಚಿರ್ ವಿರುದ್ಧ ಗೆದ್ದಿದ್ದರು. 2013 ರಲ್ಲಿ ಕಂಚಿನ ಪದಕ ಗೆದ್ದಿದ್ದರು.

ಮಾಸ್ಕೋದಲ್ಲಿ 2010ರಲ್ಲಿ ನಡೆದಿದ್ದ ವಿಶ್ವ ಕುಸ್ತಿಯಲ್ಲಿ 66 ಕೆಜಿ ವಿಭಾಗದಲ್ಲಿ ಸುಶೀಲ್ ಕುಮಾರ್ ಚಿನ್ನ ಗೆದ್ದಿದ್ದರು. ಮತ್ತೆ ಈ ಸಾಧನೆ ಮಾಡಿದ ಭಾರತದ ಎರಡನೇ ಕುಸ್ತಿಪಟುವಾಗಿದ್ದಾರೆ ಬಜರಂಗ್. ಅಲ್ದೇ ಬಜರಂಗ್ ಈಚೆಗೆ ಕಾಮನ್ವೆಲ್ತ್ ಗೆಮ್ಸ್ ಮತ್ತು ಏಷ್ಯನ್ ಗೆಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English