ಮೀ ಟೂ: ನನಗೆ ಗೊತ್ತಿಲ್ಲದೇ ಇರೋ ವಿಷಯದ ಬಗ್ಗೆ ಮಾತಾಡಲ್ಲ: ಸಚಿವೆ ಜಯಮಾಲ

3:39 PM, Monday, October 22nd, 2018
Share
1 Star2 Stars3 Stars4 Stars5 Stars
(No Ratings Yet)
Loading...

jayamalaಶಿವಮೊಗ್ಗ: ಮೀ ಟೂ ವಿಷಯದ ಬಗ್ಗೆ ಕಾಮೆಂಟ್ ಮಾಡಲ್ಲ.‌ ನನಗೆ ಗೊತ್ತಿಲ್ಲದೇ ಇರೋ ವಿಷಯದ ಬಗ್ಗೆ ಮಾತಾಡಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮೀ ಟೂ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿ ಉತ್ತರ ಕೊಡಿ ಎಂದಿದ್ದಕ್ಕೆ ‘ಏನ್ರೀ ಅದು’ ಎಂದರು. ಚುನಾವಣೆ, ಇಲಾಖೆ, ಅಂಗನವಾಡಿ ಮಕ್ಕಳ‌ ಬಗ್ಗೆ ಯೋಚಿಸುತ್ತಿದ್ದೇನೆ.‌ ಸಿನಿಮಾದಲ್ಲಿ ಏನಾಗ್ತಿದೆ ಎಂದು ನಂಗೆ ಗೊತ್ತಿಲ್ಲ. ಪ್ರತಿಕ್ರಿಯೆ ಬೇಕೇಬೇಕು ಅಂದ್ರೆ ಇಬ್ಬರಲ್ಲೂ ಕೇಳಿ ತಿಳಿದುಕೊಂಡು ಹೇಳುವೆ ಎಂದರು.

ಶಬರಿಮಲೆ ವಿಷಯದ ಬಗ್ಗೆ ಆರೂವರೆ ವರ್ಷ ಕೋರ್ಟಿನಲ್ಲಿ ಮಾತನಾಡಿದ್ದೇನೆ. ದೇವರು ಅನ್ನುವುದು ನಂಬಿಕೆ. ನನಗೆ ಸಂವಿಧಾನದಲ್ಲಿ‌ ನಂಬಿಕೆ ಇದೆ. ಕೋರ್ಟ್ ತೀರ್ಪನ್ನು ಶಿರಸಾವಹಿಸಿ ಸ್ವಾಗತಿಸುವೆ. ಎಲ್ಲರೂ ಎಲ್ಲಾ ದೇವಾಲಯಗಳಿಗೂ ಹೋಗಲು ಸಾಧ್ಯವಾಗುವುದಿಲ್ಲ. ಪರಮಾತ್ಮ ಕರೆಸಿಕೊಂಡರೆ ಮಾತ್ರ ಹೋಗಲು ಸಾಧ್ಯ. ಇಷ್ಟು ದೊಡ್ಡದಾಗಿ ಈ ವಿಷಯದ ಬಗ್ಗೆ ಚರ್ಚೆ ಮಾಡುತ್ತಿರುವುದು ನೋವಾಗುತ್ತೆ. ಅದು ಪರಮಾತ್ಮನಲ್ಲಿ ಬೇಡಲು ಹೋಗುವುದು, ಶಿಖರ ಹತ್ತಿ ಬಾವುಟ ನೆಟ್ಟು ಬರುವ ಕೆಲಸ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English