ಯೋಗಾಸನ ಸ್ಪರ್ಧೆ: ಆಳ್ವಾಸ್‍ನ ಐವರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

5:24 PM, Monday, October 22nd, 2018
Share
1 Star2 Stars3 Stars4 Stars5 Stars
(No Ratings Yet)
Loading...

alwas-clgಮೂಡುಬಿದಿರೆ: ಕಾರ್ಕಳದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸಮಗ್ರ ಪ್ರಶಸ್ತಿ ಅದರಲ್ಲಿ ಸ್ಪರ್ಧಿಸಿದ್ದ ಆಳ್ವಾಸ್ ಕನ್ನಡ ಮಾಧ್ಯಮ ಐವರು ವಿದ್ಯಾರ್ಥಿಗಳು ಎಲ್ಲ ವಿಭಾಗಗಳಲ್ಲೂ ಪ್ರಥಮ ಸ್ಥಾನ ಗಳಿಸಿ, ನವೆಂಬರ್‍ನಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

14ರ ವಯೋಮಿತಿಯ ಬಾಲಕರ ವಿಭಾಗದ ಗುಂಪು ಯೋಗದಲ್ಲಿ ಆಳ್ವಾಸ್‍ನ ಸಂಜು ಮುತ್ತಪ್ಪ , 17ರ ವಯೋಮಿಯ ಬಾಲಕರ ವಿಭಾಗದಲ್ಲಿ ಅಥ್ಲೇಟಿಕ್ ಯೋಗದಲ್ಲಿ ಮಿಲನ್ ಲೋಕೇಶ್ , ರಿದೇಮಿಕ್ ಯೋಗಾ ಪವನ್ ಈಶ್ವರ್ , 17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಗುಂಪು ಯೋಗದಲ್ಲಿ ಪ್ರಿಯಾಂಕಾ ಬಸವರಾಜ ಬಾಳೋಬಾಳ, ಅಥ್ಲೇಟಿಕ್ ಯೋಗಾದಲ್ಲಿ ರೂಪ ಈರಪ್ಪ ಸಿದ್ನಾಳ ಪ್ರಥಮ ಸ್ಥಾನ ಗಳಿಸಿದ್ದಾರೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಗಣಿತ್‍ನಗರ, ಕುಕ್ಕುಂದೂರೂ ಕಾರ್ಕಳ ಇವರ ಸಹಯೋಗದಲ್ಲಿ ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English