ಕೊಚ್ಚಿ: ಕೇರಳದ ಬಿಎಸ್‌ಎನ್‌ಎಲ್ ಉದ್ಯೋಗಿ ಹಾಗೂ ಹೋರಾಟಗಾರ್ತಿ ರೆಹನಾ ಫಾತಿಮಾ ಅವರನ್ನು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲು ಯತ್ನಿಸಿ ಮುಸ್ಲಿಂರ ಮಾನ ಹರಾಜು ಮಾಡಿದಕ್ಕೆ ಮುಸ್ಲಿಂ ಸಮುದಾಯದ ಉಚ್ಚಾಟಿಸಿದೆ.
ಅಯ್ಯಪ್ಪ ದೇಗುಲ ಪ್ರವೇಶಿಸಲು ಪ್ರಯತ್ನಿಸುವ ಮೂಲಕ ಲಕ್ಷಾಂತರ ಹಿಂದು ಭಕ್ತರ ಭಾವನೆಗಳಿಗೆ ಘಾಸಿಗೊಳಿಸಿದ ಕಾರಣಕ್ಕೆ ರೆಹನಾ ಫಾತಿಮಾ ಹಾಗೂ ಆಕೆಯ ಕುಟುಂಬವನ್ನು ಅವರನ್ನುಸಮುದಾಯದಿಂದ ಬಹಿಷ್ಕರಿಸಲಾಗಿದೆ ಎಂದು ಕೇರಳ ಮುಸ್ಲಿಂ ಜಮಾತ್ ಕೌನ್ಸಿಲ್ ತಿಳಿಸಿದೆ.
‘ಕಿಸ್ ಆಫ್ ಲವ್’ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದ ರೆಹನಾ, ಬೆತ್ತಲೆಯಾಗಿ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿದ್ದರು. ಅಯ್ಯಪ್ಪ ಸನ್ನಿಧಿಯಿಂದ 500 ಮೀಟರ್ ದೂರದವರೆಗೆ ಪತ್ರಕರ್ತೆ ಜತೆ ಪೊಲೀಸ್ ರಕ್ಷಣೆಯಲ್ಲಿ ತೆರಳಿದ್ದರು. ಅರ್ಚಕರ ಪ್ರತಿಭಟನೆ ಹಾಗೂ ಪೊಲೀಸರ ಅಸಹಾಯಕತೆ ಹಿನ್ನೆಲೆಯಲ್ಲಿ ವಾಪಸಾಗಿದ್ದರು. ದೇಗುಲ ಪ್ರವೇಶಕ್ಕೆ ಯತ್ನಿಸಿದ ಅವರ ನಿವಾಸದ ಮೇಲೆ ದಾಳಿ ನಡೆದಿತ್ತು.
Click this button or press Ctrl+G to toggle between Kannada and English