ತಿರುವನಂತಪುರಂ : ಪ್ಲೆಕಾರ್ಡ್ ಹಿಡಿದು ಶಬರಿಮಲೆಗೆ ಬಂದ ಹುಡುಗಿಯೊಬ್ಬಳ ನಡೆ ಲಕ್ಷಾಂತರ ಭಕ್ತರನ್ನು ಗಮನವನ್ನು ಸೆಳೆಯಿತು.
ಅಷ್ಟಕ್ಕೂ ಆ ಹುಡುಗಿ ಹೇಳಿದ್ದೇನು. ಶುಕ್ರವಾರದಂದು ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ತಂದೆಯ ಜೊತೆ 9 ವರ್ಷದ ಹುಡುಗಿಯೊಬ್ಬಳು ಬಂದಿದ್ದಳು. ಪ್ಲೆಕಾರ್ಡ್ ಹಿಡಿದಿದ್ದ ಆ ಹುಡುಗಿ ನನಗೀಗ 9 ವರ್ಷ ವಯಸ್ಸು, ನನಗೆ ಇನ್ನು 50 ವರ್ಷ ವಯಸ್ಸಾದ ಮೇಲೆ ಮತ್ತೆ ನಿನ್ನ ದರ್ಶನಕ್ಕೆ ಬರುತ್ತೇನೆ” ಎಂದು ಪುಟ್ಟ ಬಾಲಕಿಯೊಬ್ಬಳು ಅಯ್ಯಪ್ಪನನ್ನು ಪ್ರಾರ್ಥಿಸಿದಳು.
9 ವರ್ಷದ ಜನನಿ ಶುಕ್ರವಾರದಂದು ಕೈಯಲ್ಲಿ ಪ್ಲೆಕಾರ್ಡ್ ಹಿಡಿದಿದ್ದ ಆಕೆ ಮತ್ತು ತಂದೆ ಸತೀಶ್ ಕುಮಾರ್, ‘ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿದರು.’
ನನಗೀಗ ಒಂಬತ್ತು, ಐವತ್ತರ ನಂತರ ಮತ್ತೆ ಬರುತ್ತೇನೆ ಎನ್ನುವ ಜನನಿಗೆ ಅವರ ತಂದೆಯ ಬೆಂಬಲವೂ ಇದೆ. ನಮ್ಮ ಮಗಳಿಗೆ ಇಗ ಒಂಬತ್ತು ವರ್ಷ. ಮತ್ತೆ ಅವಳು ಐವತ್ತು ವರ್ಷ ವಯಸ್ಸಿನ ನಂತರ ಬರುತ್ತಾಳೆ. ಅದಕ್ಕೂ ಮುನ್ನವೇ ಆಕೆ ದೇವಾಲಯಕ್ಕೆ ಬರುವುದಾದರೆ ಅದಕ್ಕೆ ನನ್ನ ವಿರೋಧವಿದೆ. ಎಷ್ಟೋ ಶತಮಾನದಿಂದ ನಡೆಸಿಕೊಂಡು ಬರುತ್ತಿರುವ ಸಿದ್ಧಾಂತವನ್ನು ನಾವು ಉಳಿಸಿಕೊಂಡು ಹೋಗಬೇಕು ಎಂದರು.
Click this button or press Ctrl+G to toggle between Kannada and English