ಪುತ್ತೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಸಹಕಾರದೊಂದಿಗೆ ನವೆಂಬರ್ 03 ರಂದು ಪುತ್ತೂರಿನ ಸುದಾನ ವಸತಿಯುತ ಶಾಲಾ ವಠಾರದಲ್ಲಿ ಆಕರ್ಷಕ ಮೆರವಣಿಗೆ, ವಸ್ತು ಪ್ರದರ್ಷನ, ಆಹಾರ ಮೇಳ, ವಿವಿಧ ಸಾಹಿತ್ಯಿಕ ಗೋಷ್ಠಿಗಳು, ಮತ್ತು ಸಾಂಸ್ಕೃತಿಕ ಮನರಂಜನೆ, ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗುತ್ತಿರುವ ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನ – ತುಳು ಪರ್ಬ-2018 ರ ಆಮಂತ್ರಣವನ್ನು ಸಮ್ಮೇಳನದ ಅಧ್ಯಕ್ಷರಾದ ಪ್ರೊ. ಬಿ.ಎ.ವಿವೇಕ ರೈ ಯವರಿಗೆ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸವಣೂರು ಕೆ.ಸೀತಾರಾಮ ರೈ ಯವರು ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ, ಸ್ವಾಗತ ಸಮಿತಿಯ ಸದಸ್ಯರಾದ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಸಮ್ಮೇಳನ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಮಠಂತಬೆಟ್ಟು, ಆಮಂತ್ರಣ ಪತ್ರಿಕೆ ಸಮಿತಿ ಸಂಚಾಲಕರಾದ ಎಚ್.ಶ್ರೀಧರ್ ರೈ, ಪ್ರಚಾರ ಸಮಿತಿಯ ಸದಸ್ಯರಾದ ಯೋಗೀಶ್.ಎಸ್.ಸಾಮಾನಿ ಸಂಪಿಗೆದಡಿ ಉಪಸ್ಥಿತರಿದ್ದರು. ಪ್ರೊ.ವಿವೇಕ ರೈ ರವರ ಧರ್ಮಪತ್ನಿ ಶ್ರೀಮತಿ ಕೋಕಿಲಾ ವಿವೇಕ ರೈಯವರು ಸಮಿತಿಯವರನ್ನು ಬರಮಾಡಿಕೊಂಡರು.
Click this button or press Ctrl+G to toggle between Kannada and English