ಪ್ರಧಾನಿ ಮೋದಿಗೆ ಪ್ರತಿಷ್ಠಿತ ಸಿಯೋಲ್​ ಶಾಂತಿ ಪುರಸ್ಕಾರ

11:00 AM, Wednesday, October 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

narendra-modiನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2018ರ ಸಿಯೋಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ವಿಶ್ವದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ 14ನೇ ಗಣ್ಯರು ಎಂಬ ಹೆಗ್ಗಳಿಗೂ ಪಾತ್ರರಾಗಿದ್ದಾರೆ.

ವಿದೇಶಾಂಗ ಇಲಾಖೆ ಈ ಬಗ್ಗೆ ದೃಢೀಕರಿಸಿದ್ದು, ಅಂತಾರಾಷ್ಟ್ರೀಯ ಸಹಕಾರ, ಜಾಗತಿಕ ಆರ್ಥಿಕಾಭಿವೃದ್ಧಿ, ಮಾನವ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವುದರ ಜತೆಗೆ ಭ್ರಷ್ಟಾಚಾರ ನಿರ್ಮೂಲನೆ, ಸಾಮಾಜಿಕ ಸಮನ್ವಯದ ಮೂಲಕ ಜಗತ್ತಿನ ಅತ್ಯಂತ ವೇಗದ ಆರ್ಥಿಕಾಭಿವೃದ್ಧಿ ಹಾಗೂ ಪ್ರಜಾಪ್ರಭುತ್ವದ ಪ್ರಗತಿಗೆ ಶ್ರಮಿಸಿರುವ ಕಾರಣ ಈ ಪುರಸ್ಕಾರಕ್ಕೆ ಪ್ರಧಾನಿ ಭಾಜನರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಭಾರತ ಹಾಗೂ ವಿಶ್ವದ ಆರ್ಥಿಕಾಭಿವೃದ್ಧಿಗೆ ಅಪಾರ ಕೊಡುಗೆ ನೀಡುವ ಮೂಲಕ ಬಡವ ಹಾಗೂ ಶ್ರೀಮಂತರ ನಡುವಿನ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಿದ ಕಾರಣಕ್ಕಾಗಿ ಪ್ರಧಾನಿ ಅವರನ್ನು ಈ ಪುರಸ್ಕಾರಕ್ಕೆ ಪರಿಗಣಿಸಲಾಗಿದೆ ಎಂದು ಹೇಳಲಾಗಿದೆ.

ಸಿಯೋಲ್ ಪೀಸ್ ಪ್ರೈಸ್ ಫೌಂಡೇಶನ್ ಮೂಲಕ ಪ್ರಶಸ್ತಿ ಪ್ರದಾನ ನಡೆಯಲಿದ್ದು, ದಿನಾಂಕ ಹಾಗೂ ಸ್ಥಳದ ಬಗ್ಗೆ ಇನ್ನೂ ಮಾಹಿತಿ ತಿಳಿದುಬಂದಿಲ್ಲ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English