ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ರೂ.3 ಲಕ್ಷ ಸಾಲ

1:29 PM, Wednesday, October 24th, 2018
Share
1 Star2 Stars3 Stars4 Stars5 Stars
(No Ratings Yet)
Loading...
woman loan ಮಂಗಳೂರು :  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆಯಡಿ ಬ್ಯಾಂಕಿನಿಂದ ಗರಿಷ್ಷ ರೂ.3 ಲಕ್ಷ ಸಾಲ ಪಡೆದು ಸ್ವಂತ ಉದ್ಯೋಗ ಕೈಗೊಳ್ಳಲು ಆರ್ಥಿಕವಾಗಿ ಹಿಂದುಳಿದ 18 ರಿಂದ 55 ವರ್ಷ ವಯೋಮಿತಿಯ ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ.1.50 ಲಕ್ಷಕ್ಕೆ ಮೀರದ ಮಹಿಳೆಯರಿಂದ 2018-19ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಾಮಾನ್ಯ ವರ್ಗದ ಮಹಿಳೆಯರಿಗೆ 30% ಸಹಾಯಧನ, ಪರಿಶಿಷ್ಷ ಜಾತಿ ಮತ್ತು ಪರಿಶಿಷ್ಷ ಪಂಗಡದ ಮಹಿಳೆಯರಿಗೆ 50% , ಸಹಾಯಧನ ನೀಡಲಾಗುವುದು. ಉದ್ಯಮವನ್ನು ಪ್ರಾರಂಭಿಸಲು ಆಸಕ್ತಿ ಇರುವ ಮಹಿಳೆಯರು ಅರ್ಜಿಯನ್ನು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆದುಕೊಂಡು ಅಕ್ಟೋಬರ್ 31 ರೊಳಗಾಗಿ ತ್ರಿ-ಪ್ರತಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಸಂಬಂದಪಟ್ಟ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸುವುದು. (ಮಂಗಳೂರು ನಗರ) -0824-2432809, ಮಂಗಳೂರು(ಗ್ರಾಮಾಂತರ)-0824-2263199, ಬಂಟ್ವಾಳ-08255-232465, ವಿಟ್ಲ-08255-238080, ಪುತ್ತೂರು-08251-230388, ಸುಳ್ಯ-08257-230239, ಬೆಳ್ತಂಗಡಿ -08256-232134 ಸಂಪರ್ಕಿಸಲು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

image description

2 ಪ್ರತಿಕ್ರಿಯ - ಶೀರ್ಷಿಕೆ - ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ರೂ.3 ಲಕ್ಷ ಸಾಲ

  1. Vanishree, Mangalore

    ನಾನು ಮ್ಯಾಂಗಲೋರ್ ನಲ್ಲಿ ತೈಲೋರಿಂಗ್ ಕಾರ್ಯ ಮಾಡುತಿದ್ದೇನೆ. ಫೈನಾನ್ಸಿಯಲ್ ಆಗಿ ಥುನಭಾ ಕಷ್ಟದಲ್ಲಿದ್ದೇನೆ…. ದಯವಿಟ್ಟು ಹೆಲ್ಪ್ maadi

  2. aysamma, bajal%20Nanthur

    ೩೪೭೪೪೪೯೯೧೮೧ ಸ್ಟೇಟ್ ಬ್ಯಾಂಕ್
    ಬಜಾಲ್ ಮಂಗಳೂರ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English