ಬೆಂಗಳೂರು: 2008 ರ ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಸಲೀಂ ಸಿಸಿಬಿ ವಶದಲ್ಲಿದ್ದು, ಈಗ ಆತ ಮಾಡಬಾರದ ತಪ್ಪು ಮಾಡಿಬಿಟ್ಟೆ. ಈಗ ನನ್ನನ್ನ ಯಾರು ರಕ್ಷಿಸ್ತಾರೆ ಅಂತಾ ಪೊಲೀಸರ ಎದುರು ಕಣ್ಣೀರಿಟ್ಟಿದ್ದಾನೆ ಎನ್ನಲಾಗಿದೆ.
ಜುಲೈ 25, 2008 ರಲ್ಲಿ ನಗರದ ಮಡಿವಾಳ, ಆಡುಗೋಡಿ, ಕೋರಮಂಗಲ, ಮಲ್ಯ ಆಸ್ಪತ್ರೆ ಬಳಿ ಸೇರಿ ಒಂಭತ್ತು ಕಡೆ ಸೀರಿಯಲ್ ಬ್ಲಾಸ್ಟ್ ನಡೆದಿತ್ತು. ಈ ಬಾಂಬ್ ಬ್ಲಾಸ್ಟ್ನ ಪ್ರಮುಖ ರೂವಾರಿ ಕೇರಳ ಮೂಲದ ಉಗ್ರ ಸಲೀಂನನ್ನು ಸಿಸಿಬಿ ಪೊಲೀಸರು ಬಂಧಿಸಿ ತನಿಖೆ ಮಾಡುತ್ತಿದ್ದಾರೆ.
ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ ಮಾಡಿಸಿದ್ದು ನಾನೇ. ಬಾಂಬ್ ತಯಾರಿ ಮಾಡಿದ್ದೂ ನಾನೇ ಎಂದು ಸಿಸಿಬಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು, ಧರ್ಮ ರಕ್ಷಣೆಗಾಗಿ ನಾನು ಈ ಕೃತ್ಯಕ್ಕೆ ಕೈ ಹಾಕಿದೆ. ಆದ್ರೆ ಈಗ ನನ್ನ ಮಕ್ಕಳನ್ನ ಯಾರು ಕಾಪಾಡ್ತಾರೆ ಅಂತ ಸಿಸಿಬಿ ಪೊಲೀಸರ ಮುಂದೆ ಸಲೀಂ ಅಳಲು ತೋಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಕಳೆದೆರಡು ದಿನದ ಹಿಂದೆ ಸಲೀಂನನ್ನ ಮಹಜರ್ಗಾಗಿ ಸಿಸಿಬಿ ಪೊಲೀಸರು ಕೇರಳದ ಕಣ್ಣೂರಿಗೆ ಕರೆದೊಯ್ದಿದ್ದು, ಈ ವೇಳೆ ತನ್ನ ಮಕ್ಕಳನ್ನ ಬಿಗಿದಪ್ಪಿ, ಪೊಲೀಸರ ಮುಂದೆ ಸಲೀಂ ಅತ್ತು ಗೋಗರೆದಿದ್ದಾನೆ. ಸಲೀಂಗೆ ನಾಲ್ಕು ಮಕ್ಕಳಿದ್ದು, ಒಂದು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಮೂವರು ಹೆಣ್ಣುಮಕ್ಕಳ ಪೈಕಿ ಹಿರಿ ಮಗಳ ಮದುವೆಗೆ ಸಲೀಂ ತಯಾರಿ ನಡೆಸಿದ್ದ.
ಕಸ್ಟಡಿ ಅಂತ್ಯ ಹಿನ್ನೆಲೆ ತನಿಖೆ ಚುರುಕುಗೊಳಿಸಿ ಪೊಲೀಸರು ನಾಳೆ ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ.
Click this button or press Ctrl+G to toggle between Kannada and English