ಸಿಬಿಐಗೆ ಹೊಸ ನಿರ್ದೇಶಕರ ನೇಮಕ: ಕ್ರಮ ಸಮರ್ಥಿಸಿಕೊಂಡ ಕೇಂದ್ರ

4:31 PM, Wednesday, October 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

arun-jetleyನವದೆಹಲಿ: ಸಿಬಿಐಗೆ ನೂತನ ನಿರ್ದೇಶಕರನ್ನು ನೇಮಕ ಮಾಡಿರುವ ಬಗ್ಗೆ ಸಮರ್ಥನೆ ಮಾಡಿಕೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಸಿಬಿಐನಲ್ಲಿ ವಿಶ್ವಾಸಾರ್ಹತೆ ಉಳಿಯುವುದು ಅಗತ್ಯ ಎಂದು ಹೇಳಿದ್ದಾರೆ.

ಸಂಪುಟ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಬಿಐನ ಸ್ಪೆಷಲ್ ಡೈರೆಕ್ಟರ್, ಸಿಬಿಐನ ಡೈರೆಕ್ಟರ್ ಮೇಲೆ ಆರೋಪ ಮಾಡಿದ್ದಾರೆ. ಸಂಸ್ಥೆಯ ಹಿರಿಯ ಅಧಿಕಾರಿಗಳೇ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ ಇಬ್ಬರೂ ಆರೋಪ ಹೊತ್ತಿರುವಾಗ ಪ್ರಕರಣದ ತನಿಖೆಯನ್ನು ಯಾರು ನಡೆಸುತ್ತಾರೆ? ಎಂದು ಪ್ರಶ್ನಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಈ ಕಾರಣದಿಂದಲೇ ಕೇಂದ್ರ ಸರ್ಕಾರ ಸಿಬಿಐಗೆ ಹೊಸ ನಿರ್ದೇಶಕರನ್ನ ನೇಮಕ ಮಾಡಿದೆ. ಮುಕ್ತ ಮತ್ತು ನ್ಯಾಯ ಸಮ್ಮತ ತನಿಖೆಗೆ ಆದೇಶಿಸಿದೆ ಎಂದು ಸ್ಪಷ್ಟಪಡಿಸಿದರು.

ಇಬ್ಬರ ಆರೋಪ- ಪ್ರತ್ಯಾರೋಪಗಳನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹಾಗೂ ಪ್ರಕರಣದ ಬಗ್ಗೆ ಖಡಕ್ಕಾಗಿ ತನಿಖೆ ನಡೆಸಲಾಗುವುದು ಎಂದೂ ಇದೇ ವೇಳೆ ಅರುಣ್ ಜೇಟ್ಲಿ ಅವರು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.

ಸಿಬಿಐ ನ ವಿಶ್ವಾಸಾರ್ಹತೆ ಉಳಿಸುವ ಉದ್ದೇಶದಿಂದ ನೇಮಕ ಸಮಿತಿಯ ಶಿಫಾರಸನ್ನು ಸರ್ಕಾರ ಜಾರಿ ಮಾಡಿದೆ. ತನಿಖೆ ಬಳಿಕ ಇಬ್ಬರೂ ಆರೋಪದಿಂದ ಮುಕ್ತರಾಗಿ ಹೊರ ಬಂದರೆ ಅಧಿಕಾರಕ್ಕೆ ಹಿಂದಿರುಗುತ್ತಾರೆ ಎಂದೂ ಅವರು ಇದೇ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಹಾಜರಿದ್ದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಜತೆಗೆ ಸಿಯೊಲ್ ಶಾಂತಿ ಪ್ರಶಸ್ತಿಗೆ ಭಾಜನರಾದ ಪ್ರಧಾನಿ ಮೋದಿ ಅವರನ್ನು ಹಾಡಿಹೊಗಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English