ನಟಿ ರಶ್ಮಿ ಮನೆಯಲ್ಲಿ ಪೋಟೋಗ್ರಾಫರ್​ ಸಾವು ಪ್ರಕರಣ: ಚುರುಕುಗೊಂಡ ಪೊಲೀಸರ ತನಿಖೆ

1:31 PM, Thursday, October 25th, 2018
Share
1 Star2 Stars3 Stars4 Stars5 Stars
(No Ratings Yet)
Loading...

rashmiಬೆಂಗಳೂರು: ನಟಿ ರಶ್ಮಿ ಮನೆಯಲ್ಲಿ ಫೋಟೋಗ್ರಾಫರ್ ಸಾವು ಪ್ರಕರಣದ ತನಿಖೆ ಚುರುಕುಗೊಂಡಿದೆ.

ಕಳೆದ ಭಾನುವಾರ ರಶ್ಮಿ ಮನೆಯಲ್ಲಿ ಫೋಟೋಗ್ರಾಫರ್ ಪ್ರತೀಕ್, ರಾತ್ರಿ 11.30ರ ಸುಮಾರಿಗೆ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಆತ ಕುಡಿದ ಮತ್ತಿನಲ್ಲಿ ಕಾಲು ಜಾರಿ ಬಿದ್ದು ಸಾವಿಗೀಡಾಗಿದ್ದಾನೆ ಅನ್ನೋದು ರಶ್ಮಿ ಮಾತಾಗಿತ್ತು. ಈ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಪ್ರತೀಕ್ ಹಾಗೂ ರಶ್ಮಿ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಇವರಿಬ್ಬರ ಮಧ್ಯೆ ಏನಾದ್ರು ಇತ್ತಾ ಅನ್ನೋ ಆಯಾಮದಲ್ಲಿ ತನಿಖೆ ಮಾಡ್ತಿದ್ದಾರೆ. ತನಿಖೆಯ ಭಾಗವಾಗಿ ರಶ್ಮಿ ಮೊಬೈಲನ್ನು ವಶಕ್ಕೆ ಪಡೆದು ಎಫ್ಎಸ್ಎಲ್ ರಿಪೋರ್ಟ್ಗೆ ಕಳುಹಿಸಿದ್ದಾರೆ.

ಇದೆಲ್ಲೆದರ ನಡುವೆ ಪ್ರತೀಕ್ ಬಿದ್ದ ಕೂಡಲೇ ಎದುರು ಮನೆಯಲ್ಲಿದ್ದ ಚಂದನಾ ಅನ್ನೋ ಯುವತಿ ಕೂಡ ಮೊದಲ ಮಹಡಿಯಿಂದ ಬಿದ್ದಿದ್ದಾಳಂತೆ. ಸದ್ಯ ಈಕೆ‌ ಬಿಜಿಎಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹೀಗಾಗಿ ಆಕೆಯ ಹೇಳಿಕೆಯನ್ನ ಪಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅಂದು ರಾತ್ರಿ ಪ್ರತೀಕ್ ಬೀಳೋದನ್ನ ಯುವತಿ ನೋಡಿದ್ಲಾ?. ಅಥವಾ ಆ ಯುವತಿ ಮತ್ತು ಪ್ರತೀಕ್ ಮಧ್ಯೆ ಏನಾದ್ರೂ ಇತ್ತಾ?, ಪ್ರತೀಕ್ ಬಿದ್ದ ಕೂಡಲೇ ಚಂದನಾ ಯಾಕೆ ಬಿದ್ದಳು? ಈ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English