ಮಧು ಬಂಗಾರಪ್ಪ ಡಮ್ಮಿ ಅಲ್ಲ..ಬಿಜೆಪಿಯ ರಾಘವೇಂದ್ರ ಅವರೇ ಡಮ್ಮಿ ಕ್ಯಾಂಡಿಟೇಟ್: ಸಿದ್ದರಾಮಯ್ಯ

1:57 PM, Friday, October 26th, 2018
Share
1 Star2 Stars3 Stars4 Stars5 Stars
(No Ratings Yet)
Loading...

congressಶಿವಮೊಗ್ಗ: ಲೋಕಸಭಾ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಡಮ್ಮಿ ಕ್ಯಾಂಡಿಟೇಟ್ ಅಲ್ಲ, ಬಿಜೆಪಿಯ ರಾಘವೇಂದ್ರ ಅವರೇ ಡಮ್ಮಿ ಕ್ಯಾಂಡಿಟೇಟ್ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಈಶ್ವರಪ್ಪ ಹಾವು ಮುಂಗೂಸಿಯಂತೆ ಇದ್ರು. ಈಗ ಒಂದಾಗಿದ್ದಾರಷ್ಟೆ ಎಂದು ನಿನ್ನೆ ಬಿಎಸ್ವೈ ಮೈತ್ರಿ ಬಗ್ಗೆ ಯಂಕ ನಾಣಿ, ಸೀನ ಒಂದಾಗಿದ್ದಾರೆ ಎಂದು ತಿರುಗೇಟು ನೀಡಿದರು. ಈ ಬಾರಿ ಶಿವಮೊಗ್ಗ ಲೊಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟಿದ್ದೇವೆ. ಇಂದು ಬಂಗಾರಪ್ಪನವರ ಹುಟ್ಟುಹಬ್ಬವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.

ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನು ನಾಲ್ಕು ತಿಂಗಳು ಮಾತ್ರ ಇದೆ. ಇದರಿಂದ ಈ ಚುನಾವಣೆ ಅನಾವಶ್ಯಕವಾಗಿದೆ. ರಾಷ್ಟ್ರೀಯ ಪಕ್ಷವಾಗಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮಧು ಬಂಗಾರಪ್ಪ ನಮ್ಮ ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ಪಕ್ಷ ಭೇದ ಬಿಟ್ಟು ಎರಡೂ ಪಕ್ಷದವರು ಮಧು ಗೆಲ್ಲಬೇಕು ಎಂಬ ಛಲದಿಂದ ಕೆಲ್ಸ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಸ್ವಲ್ಪ ಭಿನ್ನಮತವಿತ್ತು. ಅದನ್ನು ಬಗೆಹರಿಸಲಾಗಿದೆ. ಕೋಮುವಾದಿ ಪಕ್ಷವನ್ನು ಸೋಲಿಸುವುದೇ ನಮ್ಮ ಗುರಿ. ಇಂದು ಬಿಜೆಪಿಗೆ ವಿರುದ್ಧವಾದ ಅಲೆ ಇದೆ. ನರೇಂದ್ರ ಮೋದಿ ಸರ್ಕಾರ ವಚನಭ್ರಷ್ಟ ಸರ್ಕಾರವಾಗಿದೆ ಎಂದರು.

ದೇಶದಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತಿದೆ. ಅಗತ್ಯ ವಸ್ತು ಬೆಲೆ ಏರಿಕೆಯಾಗುತ್ತಿದೆ. ನಿರುದ್ಯೋಗ ಹೆಚ್ಚಾಗುತ್ತಿದೆ. ದೇಶದಲ್ಲಿ ಆಮದು ಹೆಚ್ಚಾಗಿ, ರಫ್ತು ಕಡಿಮೆಯಾಗಿದೆ. ಇದೇ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಕೇಂದ್ರ ಎರಡೂವರೆ ಕೋಟಿ ಅಲ್ಲ ಎರಡೂವರೆ ಲಕ್ಷ ಉದ್ಯೋಗ ಸಹ ಸೃಷ್ಟಿ ಮಾಡಲು ಆಗಿಲ್ಲ. ನರೇಂದ್ರ ಮೋದಿ ವಚನ ಭ್ರಷ್ಟರಾಗಿದ್ದಾರೆ. 5 ಉಪ ಚುನಾವಣೆಯಲ್ಲೂ ಸಹ ಬಿಜೆಪಿ ಸೋಲುತ್ತದೆ ಎಂದರು.

ಕಳೆದ ಬಾರಿ ಬಿಜೆಪಿಯವರು ಮಾಡಿದ ಅಪಪ್ರಚಾರದಿಂದ ಸೋಲುಂಟಾಯಿತು. ಆದರೂ ಕಾಂಗ್ರೆಸ್ ಶೇಕಾಡವಾರು ಮತಗಳಿಗೆಯಲ್ಲಿ ಹೆಚ್ಚಾಗಿದೆ. ಈ ಮೈತ್ರಿ ಲೋಕಸಭಾ ಚುನಾವಣೆಯಲ್ಲೂ ಮುಂದುವರೆಯಲಿದೆ. ಮಧು ಬಂಗಾರಪ್ಪ ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತಾರೆ. ಕರಾವಳಿ ಪ್ರದೇಶಗಳು ಬಿಜೆಪಿಯ ಹಿಂದೂತ್ವ ಹರಡುವ ಪ್ರಯೋಗ ಶಾಲೆ ಇದ್ದಂತೆ. ಈ ಬಾರಿ ಅಪಪ್ರಚಾರಗಳು ನಡೆಯುವುದಿಲ್ಲ. ಮೈತ್ರಿ ಸರ್ಕಾರಕ್ಕೂ ಫಲಿತಾಂಶಕ್ಕೂ ಸಂಬಂಧವಿಲ್ಲ. ಮೋದಿ ಸಿಬಿಐನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಬಿಎಸ್ವೈಗೆ ವಯಸ್ಸಾಗಿದೆ. ಲೋಕಸಭಾ ಚುನಾವಣೆಯ ಒಳಗೆ ಸಿಎಂ ಆಗಬೇಕು ಎಂದು ಯತ್ನ ಮಾಡುತ್ತಿದ್ದಾರೆ. ದುರಾಸೆಯಿಂದ ಸಿಎಂ ಆಗಲು ಯತ್ನ ಮಾಡುತ್ತಿದ್ದಾರೆ ಎಂದರು.

ಶೋಭಾ ಕರಂದ್ಲಾಜೆರವರು ಬಿಎಸ್ವೈ ಸಿಎಂ ಆಗಬೇಕು ಎನ್ನುತ್ತಾರೆ, ಆದ್ರೆ ಸೋಮಣ್ಣ, ಶ್ರೀರಾಮುಲು ಕೂಡ ಸಿಎಂ ಆಗಬೇಕು ಎನ್ನುತ್ತಾರೆ. ಮುಂದೆ ಸಿಎಂ ಆಗಬೇಕು ಎಂಬ ದುರಾಸೆ ನನ್ನಲ್ಲಿ ಇಲ್ಲ. ಮುಂದಿನ ಬಾರಿ ಜನ ಆಶೀರ್ವಾದ ಮಾಡಿದರೆ ನೋಡೋಣ ಎಂದು ತಮ್ಮ ರಾಜಕೀಯ ಭವಿಷ್ಯದ ಕುರಿತು ಸುಳಿವು ನೀಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English