ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕಳೆದ ೩೫ ವರ್ಷಗಳಿಂದ ಕಛೇರಿ ಸಹಾಯಕಿಯಾಗಿ ಕಾರ್ಯನಿರ್ವಹಿಸಿದ ಶ್ರೀಮತಿ ರಾಜೀವಿಯವರು ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯದಲ್ಲಿ ಬಳಲುತ್ತಿದ್ದರು. ಇವರಿಗೆ 57 ವರ್ಷ ಆಗಿರುತ್ತದೆ. ಇವರು ೩ ಗಂಡು ಹಾಗೂ 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮಾಜಿ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ಸಂತಾಪ ಸೂಚಿಸಿದರು. ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಮ.ನ.ಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಮೇಯರ್ ಭಾಸ್ಕರ್ ಮೊಲಿ, ಉಪಮೇಯರ್ ಮಹಮ್ಮದ್ ಕುಂಜತ್ತ್‌ಬೈಲ್, ಸಂತೋಷ್ ಕುಮಾರ್ ಶೆಟ್ಟಿ, ಕೆ.ಅಶ್ರಫ್, ಕೇಶವ ಮರೋಳಿ, ಶೋಭಾ ಪಡೀಲ್, ಕವಿತಾ ವಾಸು, ಅಬ್ದುಲ್ ಲತೀಫ್, ಜೆಸಿಂತಾ ಆಲ್ಫ್ರೇಡ್, ಕುಮಾರಿ ಅಪ್ಪಿ, ನಮಿತಾ ಡಿ.ರಾವ್, ಟಿ.ಪ್ರವೀಣ್ ಚಂದ್ರ ಆಳ್ವ, ಸಿ.ಎಮ್ ಮುಸ್ತಫ, ನಝೀರ್ ಬಜಾಲ್, ಶಬ್ಬೀರ್ ಸಿದ್ಧಕಟ್ಟೆ ಅಂತಿಮ ದರ್ಶನ ಪಡೆದರು.
ಕಾಂಗ್ರೆಸ್ ಪಕ್ಷದ ಸೇವಾದಳದ ಕಾರ್ಯಕರ್ತೆಯಾಗಿ ಪಕ್ಷಕ್ಕೆ ಅವಿರತವಾಗಿ ಸೇವೆ ಸಲ್ಲಿಸಿರುವ ಇವರು ಕಾರ್ಯಕರ್ತರೆಲ್ಲರ ಪ್ರೀತಿಯ ರಾಜೀವಿ ಅಕ್ಕ ಎಂದೇ ಕರೆಯಲ್ಪಡುತ್ತಿದ್ದ ವ್ಯಕ್ತಿ. ಇವರ ಅಗಲುವಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ದೀರ್ಘ ಕಾಲದ ಅವಧಿಯಲ್ಲಿ ಕಾಂಗ್ರೆಸ್ ಕಛೇರಿಯಲ್ಲಿ ಸೇವೆ ಸಲ್ಲಿಸಿ ನಮ್ಮನ್ನು ಅಗಲಿದ ಶ್ರೀಮತಿ ರಾಜೀವಿಯವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೆ.ಹರೀಶ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಯು.ಟಿ ಖಾದರ್, ತುಳು ಅಕಾಡೆಮಿ ಅಧ್ಯಕ್ಷರಾದ ಎ.ಸಿ ಭಂಡಾರಿ, ಮಾಜಿ ಸಂಸದರಾದ ಬಿ.ಇಬ್ರಾಹಿಂ, ಮಾಜಿ ವಿಧಾನಪರಿಷತ್ತು ಶಾಸಕರಾದ ಮಹಮ್ಮದ್ ಮಸೂದ್, ವಿಧಾನ ಪರಿಷತ್ತು ಶಾಸಕರಾದ ಐವನ್ ಡಿ’ಸೋಜಾ, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಬಿ.ಮೊಯ್ದಿನ್ ಬಾವಾ, ವಸಂತ ಬಂಗೇರ, ಶಕುಂತಲಾ ಶೆಟ್ಟಿ, ಜೆ.ಆರ್ ಲೋಬೋ, ಡಾ. ರಘ, ಹೇಮನಾಥ ಶೆಟ್ಟಿ, ಬಿ.ಎಚ್ ಖಾದರ್, ಮಮತಾ ಗಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಮಿಥುನ್ ರೈ, ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಎಮ್.ಎಸ್ ಮೊಹಮದ್, ಪದ್ಮಶೇಖರ್ ಜೈನ್, ವೆಂಕಪ್ಪ ಗೌಡ ಸುಳ್ಯ, ಎನ್.ಎಸ್ ಕರೀಂ, ಪ್ರಸಾದ್ ರಾಜ್ ಕಾಂಚನ್, ಸುರೇಶ್ ಬಲ್ಲಾಳ್, ಬಾಲರಾಜ್ ರೈ, ಸದಾಶಿವ ಉಳ್ಳಾಲ್, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ನೀರಜ್ ಪಾಲ್, ಯು.ಎಚ್ ಖಾಲಿದ್, ಹರ್ಷರಾಜ್ ಮುದ್ಯ, ಈಶ್ವರ್ ಉಳ್ಳಾಲ್, ಪ್ರಸಾದ್ ಜೈನ್ ಮೂಡಬಿದ್ರೆ, ಸಾಹುಲ್ ಹಮೀದ್, ಪುರುಷೋತ್ತಮ ಚಿತ್ರಾಪುರ, ಆಶಾ ಡಿ’ಸಿಲ್ವಾ, ಧರಣೇಂದ್ರ ಕುಮಾರ್, ಅಬ್ದುಲ್ ರವೂಫ್, ಶೇಖರ್ ಕುಕ್ಕೇಡಿ, ಅಬ್ದುಲ್ಲಾ ಬಿನ್ನು, ಗಿರೀಶ್ ಆಳ್ವ, ಉಮಾನಾಥ ಶೆಟ್ಟಿ, ಶಾಲೆಟ್ ಪಿಂಟೋ, ಲೋಕೇಶ್ ಹೆಗ್ಡೆ, ಅಶ್ರಫ್ ಸೇವಾದಳ ಸಂತಾಪ ಸೂಚಿಸಿದರು.
Click this button or press Ctrl+G to toggle between Kannada and English