ನಟ ಅರ್ಜುನ್ ಸರ್ಜಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೊನೆಗೂ ದೂರು ಸಲ್ಲಿಸಿದ ನಟಿ ಶ್ರುತಿ ಹರಿಹರನ್​

3:24 PM, Saturday, October 27th, 2018
Share
1 Star2 Stars3 Stars4 Stars5 Stars
(No Ratings Yet)
Loading...

arjunಬೆಂಗಳೂರು: ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೊನೆಗೂ ದೂರು ಸಲ್ಲಿಕೆ ಮಾಡಿದ್ದಾರೆ.

ಇಂದು ತಮ್ಮ ವಕೀಲ ಅನಂತ್ ನಾಯ್ಕ ಜತೆ ಠಾಣೆಗೆ ಆಗಮಿಸಿದ ಅವರು, ಈ ದೂರು ಕೊಟ್ಟಿದ್ದಾರೆ. ದೂರಿನಲ್ಲಿ ಸರ್ಜಾ ಮೇಲೆ ಅರೋಪಗಳ ಸುರಿಮಳೆ ಮಾಡಿರುವ ಶ್ರುತಿ, ರಿಹರ್ಸಲ್ ಮಾಡುವಾಗ ಹಲವು ಬಾರಿ ನನ್ನನ್ನು ತಬ್ಬಿಕೊಂಡ್ರು, ಮುತ್ತು ಕೊಟ್ರು. ಊಟಕ್ಕಾಗಿ ಪದೇ ಪದೆ ಯುಬಿ ಸಿಟಿಗೆ ಬರುವಂತೆ ಕರೆಯುತ್ತಿದ್ದರು. ನಾನು ಎಷ್ಟೇ ಪ್ರತಿರೋಧಿಸಿದ್ರು ನನ್ನನ್ನು ಮೈ-ಕೈ ಮುಟ್ಟುತ್ತಿದ್ರು ಎಂದು ಉಲ್ಲೇಖಿಸಿದ್ದಾರೆ.

ನನ್ನನ್ನು ಒಬ್ಬಂಟಿಯಾಗಿ ರೆಸಾರ್ಟ್ ‌ಕರೆಯುವ ಹಿಂದಿನ ಉದ್ದೇಶವೇನು? ಸಹಜವಾಗಿಯೇ ಇದು ಕಾಮತೃಷೆ ತೀರಿಸಿಕೊಳ್ಳಲೆಂದೆ‌ ಅವರು ನನ್ನ ರೆಸಾರ್ಟ್ಗೆ ಕರೆದಿದ್ರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಶ್ರುತಿ ನೀಡಿರುವ ದೂರಿನ ಮೇರೆಗೆ ಅರ್ಜುನ್ ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್ 504, 506, 354 ಅಡಿಯಲ್ಲಿ ಪೊಲೀಸರು ಪ್ರಕರಣದಾಖಲಿಸಿಕೊಂಡಿದ್ದಾರೆ.

arjun-2

arjun-3

arjun-4

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English