ಶಿವಮೊಗ್ಗ: ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಹೇಳಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಬದಲಾವಣೆ ಸಹಜ, ರಾಜಕೀಯ ಹರಿಯುವ ನೀರು ಇದ್ದಂತೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಮೇ ತಿಂಗಳಲ್ಲಿ ಸಂಸದ ಸ್ಥಾನಕ್ಕೆ ಮೂರು ಜನ ರಾಜೀನಾಮೆ ನೀಡಿದ್ರು. ರಾಜೀನಾಮೆ ನೀಡಿದ 6 ತಿಂಗಳ ನಂತರ ಚುನಾವಣೆ ಘೋಷಣೆ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
ಈಗ ನಡೆಯುವ ಉಪ ಚುನಾವಣೆಯಲ್ಲಿ ಗೆಲ್ಲುವವರಿಗೆ ಮುಂದಿನ 5 ವರ್ಷ ಅಧಿಕಾರದಲ್ಲಿ ಇರುವಂತೆ ಮಾಡಬೇಕು ಇಲ್ಲ ಉಪ ಚುನಾವಣೆ ನಡೆಸಬಾರದು ಎಂದು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು. ಎರಡು ಪಕ್ಷಗಳ ಹೊಂದಾಣಿಕೆಯಿಂದ ಹೋಗುತ್ತಿದ್ದಾರೆ. ಈ ಚುನಾವಣೆಯು ಸರ್ಕಾರ 5 ವರ್ಷ ಮುಂದುವರೆಯಲು ಸಹಕಾರವಾಗುತ್ತದೆ. ಮಧು ಬಂಗಾರಪ್ಪ ಯುವ ಜನತಾದಳದ ಅಧ್ಯಕ್ಷರಾಗಿ ರಾಜ್ಯ ಪ್ರವಾಸ ಮಾಡಿದ ಪರಿಣಾಮ ಸೋಲನ್ನು ಕಾಣಬೇಕಾಯಿತು. ಪುಟ್ಟರಾಜುರವರು ಶಾಸಕರಾಗಿ ಸಾಕಷ್ಟು ಒಳ್ಳೆಯ ಕೆಲ್ಸ ಮಾಡಿದ್ರು. ಅದ್ರೆ ಸೋತರು ನಂತರ ಎಂಪಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅದೇ ರೀತಿ ಮಧು ಬಂಗಾರಪ್ಪನವರು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಂಡ್ಯದ ಉದಾಹರಣೆ ನೀಡಿದರು.
ಉಪ ಚುನಾವಣೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಈ ಬಾರಿ ಮೈತ್ರಿ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಿ ಬುದ್ಧಿ ಕಲಿಸುತ್ತಾರೆ. ಎರಡು ಕಡೆ ಸ್ಪರ್ಧೆ ಮಾಡುವುದನ್ನು ಚುನಾವಣಾ ಆಯೋಗ ನಿಷೇಧ ಮಾಡಬೇಕು ಎಂದರು. ಈ ವೇಳೆ ಮಾಜಿ ಶಾಸಕ ಕೋನರೆಡ್ಡಿ, ಶಿವಶಂಕರ್, ಜೆಡಿಎಸ್ ವಕ್ತಾರ ರಮೇಶ್, ಎಂ.ಶ್ರೀಕಾಂತ್, ಭೀಮಣ್ಣ ರೆಡ್ಡಿ ಸೇರಿ ಇತರರು ಹಾಜರಿದ್ದರು.
Click this button or press Ctrl+G to toggle between Kannada and English