ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವಷ್ಟು ಸಲುಗೆ ಸಿದ್ದರಾಮಯ್ಯ ಜೊತೆಗಿಲ್ಲ: ಹಾಲಾಡಿ ಶ್ರೀನಿವಾಸ ಶೆಟ್ಟಿ

5:26 PM, Saturday, October 27th, 2018
Share
1 Star2 Stars3 Stars4 Stars5 Stars
(No Ratings Yet)
Loading...

srinivas-shettyಕುಂದಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಬೈಂದೂರಿನ ನಾಗೂರಿನಲ್ಲಿ ನಡೆದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಖವನ್ನೇ ನೋಡಿಲ್ಲ ಎಂದು ಏಕವಚನದಲ್ಲಿ ಮಾತನಾಡಿದ್ದಕ್ಕೆ ಶುಕ್ರವಾರ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಮುಖ್ಯಮಂತ್ರಿಯಾಗಿದ್ದುಕೊಂಡು ಒರ್ವ ಶಾಸಕನ ಬಗ್ಗೆ ಏಕವಚನದಲ್ಲಿ ಮಾತನಾಡುವಷ್ಟು ಸಲುಗೆ ನಮಗೆ ಅವರೊಂದಿಗಿಲ್ಲ. ಸಲುಗೆ ಇದ್ದವರ ಜೊತೆ ಬೇಕಾದರೆ ಅವರು ಮಾತನಾಡಲಿ ನಮ್ಮ ಅಭ್ಯಂತರವೇನು ಇಲ್ಲ. ಅವರು ಯಾವ ಉದ್ದೇಶದಿಂದ ಹಾಗೆ ಮಾತನಾಡಿದರು ಎಂಬುದು ನನಗೆ ತಿಳಿದಿಲ್ಲ. ಅವರೇ ವಿಮರ್ಶೆ ಮಾಡಿಕೊಳ್ಳಲಿ ಎಂದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ ಯಾರು ಎನ್ನುವುದು ತಿಳಿದೆ ಇಲ್ಲ ಎನ್ನುವ ಸಿದ್ದರಾಮಯ್ಯನವರು ಬಾರ್ಕೂರು ಸಂಸ್ಥಾನದ ಕಾರ್ಯಕ್ರಮದಲ್ಲಿ ಅವರೊಂದಿಗಿದ್ದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ನನ್ನನ್ನು ಪರಿಚಯಿಸಿ ಹಾಲಾಡಿಯವರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದಾಗ ಬನ್ನಿ ಶೆಟ್ರೆ ನೀವು ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು. ಎರಡನೇಯ ಬಾರಿ ವಿಶೇಷ ಅನುದಾನ ಕೇಳುವ ನಿಟ್ಟಿನಲ್ಲಿ ಅವರ ಕಚೇರಿಗೆ ನಾನು ಹೋಗಿದ್ದೆ. ಆಗ ಅಲ್ಲಿ ಮಾಜಿ ಮಂತ್ರಿಗಳಾದ ಅಭಯಚಂದ್ರ ಜೈನ್ ಹಾಗೂ ವಿನಯ್ ಕುಮಾರ್ ಸೊರಕೆ ಇದ್ದಿದ್ದರು. ನಾನು ಅವರಿಗೆ ನನ್ನ ಕ್ಷೇತ್ರಕ್ಕೆ ಅನುದಾನವನ್ನು ಕೇಳಿ ಮನವಿ ಪತ್ರವನ್ನು ಕೊಟ್ಟಾಗ, ಶ್ರೀನಿವಾಸ ಶೆಟ್ಟಿಯವರೇ ನೀವು ನಮ್ಮ ಪಕ್ಷಕ್ಕೆ ಬನ್ನಿ ಎಂದಿದದಲ್ಲದೆ ವಿನಯ್ ಕುಮಾರ್ ಸೊರಕೆಯವರೇ ನೀವು ಏನು ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳಿದ್ದರು. ಆಗ ನಾನು ನಿಮ್ಮ ಪಕ್ಷಕ್ಕೆ ಬರುವುದಿಲ್ಲ ಕ್ಷೇತ್ರಕ್ಕೆ ಅನುದಾನ ಕೊಡಿ ಇಲ್ಲಾಂದ್ರೆ ಬಿಡಿ ಎಂದು ಹೇಳಿ ಬಂದಿದ್ದೆ ಎಂದು ಹಿಂದೆ ನಡೆದ ಘಟನೆಗಳನ್ನು ವಿವರಿಸಿದರು.

ಉಡುಪಿಯಲ್ಲಿ ಜಿ ಶಂಕರ್ ನೇತೃತ್ವದಲ್ಲಿ ಮೊಗವೀರ ಸಮಾವೇಶ ನಡೆದಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದರು. ಆಗ ನಾನು ಅದೇ ವೇದಿಕೆಯಲ್ಲಿ ಒಂದು ಬದಿಯಲ್ಲಿ ಕೂತಿದ್ದೆ. ಅವರ ಪಕ್ಕದಲ್ಲಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕೂತಿದ್ದು ಅವರನ್ನು ಎಬ್ಬಿಸಿ ಶೆಟ್ರೆ ಇಲ್ಲಿ ಬನ್ನಿ ಎಂದು ಅವರ ಪಕ್ಕದಲ್ಲಿ ಕೂರಿಸಿಕೊಂಡಿದ್ದರು. ಹಾಗಾದರೆ ಪರಿಚಯವಿಲ್ಲದೆ ಸಿದ್ದರಾಮಯ್ಯನವರು ಇಷ್ಟೆಲ್ಲಾ ಮಾಡಿದ್ದರೇ ಎಂದು ಹಾಲಾಡಿ ಪ್ರಶ್ನಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English