ಮರಳು ಸಮಸ್ಯೆ ಧರಣಿ ವೇಳೆ ಮೃತರಾದ ಹನೀಪ್ ಮನೆಗೆ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಸಾಂತ್ವನ

12:06 PM, Monday, October 29th, 2018
Share
1 Star2 Stars3 Stars4 Stars5 Stars
(No Ratings Yet)
Loading...

srinivas-poojaryಉಡುಪಿ: ಜಿಲ್ಲೆಯಲ್ಲಿ ಮರಳು ಸಮಸ್ಯೆಯಿಂದಾಗಿ ಕೂಲಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ ಅನೇಕರು ಉದ್ಯೋಗ ಕಳೆದುಕೊಂಡು ಆತಂಕಿತರಾಗಿರುವ ಹಿನ್ನೆಲೆಯಲ್ಲಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ನಡೆಯುತ್ತಿರುವ ಧರಣಿಯಲ್ಲಿ‌ ಪಾಲ್ಗೊಂಡ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತರಾದರ 45 ವರ್ಷ ಪ್ರಾಯದ ಹೆಜಮಾಡಿಯ ಹನೀಪ್ ಅವರ ಮನೆಗೆ ಇಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಸಾಂತ್ವನ ಹೇಳಿದರು.

ಮೃತ ಹನೀಪ್ ರ ವಯೋವೃದ್ದ ತಾಯಿ, ಅವರ ಸಹೋದರರು ಮತ್ತು ಮೂರು ಮಕ್ಕಳನ್ನು ಭೇಟಿಯಾಗಿ ಸಮಾದಾನ ಪಡಿಸಿದ ಕೋಟ ಶ್ರೀನಿವಾಸ ಪೂಜಾರಿಯವರು, ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನೆಯ ಯಜಮಾನನನ್ನು ಕಳೆದುಕೊಂಡ ಸಂತೃಸ್ಥ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡಲು ಆಗ್ರಹ ಮಾಡುವುದಾಗಿ ತಿಳಿಸಿದರು.

ಮೃತ ಹನೀಪ್ ಅವರ ಕುಟುಂಬ ಈಗಿರುವ ಮನೆಕೂಡ ಬಾಡಿಗೆಯದ್ದಾಗಿದೆ ಎಂದು ವಿಪಕ್ಷ ನಾಯಕರಿಗೆ ನೆರೆದ ಹನೀಪ್ ಅವರ ಬಂಧುಗಳು ತಿಳಿಸಿದರು.

ಕೋಟ ಅವರೊಂದಿಗೆ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರೆ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English