ಕರಿಂಜೆ ಕ್ಷೇತ್ರದಲ್ಲಿ ನಡೆದ ಹಿಂದೂ ಧರ್ಮಜಗೃತಿ ಸಭೆ

1:11 PM, Monday, October 29th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

hinduಮೂಡಬಿದ್ರೆ : 28 ಅಕ್ಟೋಬರ್ ಕರಿಂಜೆ ಶ್ರೀ ಲಕ್ಮೀಸತ್ಯನಾರಾಯಣ ವೀರಾಂಜನೇಯ ದೇವಸ್ಥಾನ ಸಭಾಗೃಹ ದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪೂಜ್ಯ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಹಿಂದೂ ಧರ್ಮಜಾಗೃತಿ ಸಭೆಯು ನಡೆಯಿತು. ಈ ಸಂದರ್ಭದಲ್ಲಿ ವ್ಯಾಸ ಪೀಠದಲ್ಲಿ ನಾಳದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಅಸ್ರಣ್ಣ , ಹಿಂದೂ ಜನಜಾಗೃತಿ ಸಮಿತಿಯ ಶ್ರೀ ವಿಜಯ ಕುಮಾರ , ಸನಾತನ ಸಂಸ್ಥೆಯ ಡಾ. ಸೌ . ಶ್ರೀಕಲಾ ಜೋಷಿ ಉಪಸ್ಥಿತರಿದ್ದರು. ಸಭೆಯನ್ನು ಸ್ವಾಮೀಜಿಗಳ ದಿವ್ಯ ಹಸ್ತದಿಂದ ದೀಪಪ್ರಜ್ವಲನೆಯ ಮುಖಾಂತರ ಪ್ರಾರಂಭಿಸಲಾಯಿತು

ಈ ಸಭೆಯಲ್ಲಿ ಕರಿಂಜೆ ಆಸುಪಾಸಿನ 5 ಗ್ರಾಮದಿಂದ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸೌ ಶ್ರೀಕಲಾ ಜೋಷಿಯವರು ಶಾಲೆಯ ಶಿಕ್ಷಣದ ಜೊತೆ ಧರ್ಮಶಿಕ್ಷಣವನ್ನು ನೀಡುವುದು ಕೂಡ ತಂದೆ ತಾಯಿಯವರ ಕರ್ತವ್ಯವೇ ಆಗಿದೆ. ಧರ್ಮಶಿಕ್ಷಣದ ಅಭಾವದಿಂದ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಯ ಕಡೆ ಹೋಗುತ್ತಿದ್ದಾರೆ. ಇಂತಹಾ ಮಕ್ಕಳಿಗೆ ಹಿಂದೂ ಧರ್ಮದಲ್ಲಿನ ಆಚಾರ ವಿಚಾರಗಳನ್ನು ಪಾಲಿಸಲು ನಾಚಿಕೆ ಯಾಗಿತ್ತಿದೆ.

ಧರ್ಮಾಭಿಮಾನ ಇಲ್ಲದ ಕಾರಣ ಧರ್ಮವಿರೋಧಿ ಕೃತಿಗಳು ನಡೆದರೂ ಕೂಡ ನಮಗೆ ಏನೂ ಅನಿಸುವುದಿಲ್ಲ . ಧರ್ಮವಿರೋಧಿ ಕೃತಿಗಳನ್ನು ಮಾಡುವ ಅಧರ್ಮೀಯರ ವಿರುದ್ಧ ಇಂದು ನಾವು ವೈಚಾರಿಕ ಸ್ಥರದಲ್ಲಿ ಹೋರಾಟ ಮಾಡಬೇಕಾಗಿದೆ. ಇದಕ್ಕಾಗಿ ಎಲ್ಲರೂ ಕೂಡ ಧರ್ಮಶಿಕ್ಷಣವನ್ನು ಪಡೆಯಬೇಕಾಗಿದೆ ಎಂದು ಹೇಳುತ್ತಿದರು.

hindu-2ಈ ಸಂದರ್ಭದಲ್ಲಿ ಪ್ರಸ್ತುತ ವ್ಯವಸ್ಥೆಯಲ್ಲಿ ದೇವಸ್ಥಾನಗಳ ಸ್ಥಿತಿಯ ಬಗ್ಗೆ ಶ್ರೀ ರಾಘವೇಂದ್ರ ಅಸ್ರಣ್ಣರವರು ಮಾತನಾಡುತ್ತಾ ಜಿಲ್ಲೆಯಲ್ಲಿನ ಪುರಾತನ ದೇವಸ್ಥಾನಗಳು ಋಷಿಮುನಿಗಳಿಂದ ಸ್ಥಾಪಿತವಾದ ದೇವಸ್ಥಾನಗಳಾಗಿವೆ. ಇಂತಹಾ ಹೆಚ್ಚಿನ ದೇವಸ್ಥಾನಗಳು ಇಂದು ಸರಕಾರದ ಆಡಳಿತದಲ್ಲಿವೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷದವರ ಪ್ರತಿನಿಧಿಗಳು ಆಡಳಿತ ಮಂಡಳಿಯಲ್ಲಿ ಇರುವುದರಿಂದ ಇಂದು ದೇವಸ್ಥಾನಗಳನ್ನೂ ಕೂಡ ರಾಜಕೀಯಪಕ್ಷದ ದೇವಸ್ಥಾನವೆಂದು ಹೇಳುವ ಸ್ಥಿತಿ ನಿರ್ಮಾಣವಾಗಿದೆ.

ಈ ಕಾರಣದಿಂದ ಊರುಕೂಡ ಇಬ್ಬಾಗ ವಾಗಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಅಧಿಕಾ ರಿಯಾಗಿ ಓರ್ವ ಅನ್ಯಪಂಥೀಯ ನೇಮಕಗೊಂಡ ಪ್ರಸಂಗ ಎಲ್ಲರಿಗೂ ತಿಳಿದಿದೆ.

ಇಂದು ಇತರ ಸಂಘ ಸಂಘಟನೆಗಳು ಹಿಂದೂಗಳ ಅವನತಿಗಾಗಿ ಅನ್ಯಮತೀಯರನ್ನು ತೆಗಳುತ್ತವೆ. ಆದರೆ ಧರ್ಮ ಶಿಕ್ಷಣವನ್ನು ಸಮಾಜ ಭಾಂದವರಿಗೆ ತಿಳಿಹೇಳುವ ಬಗ್ಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಈ ಕಾರ್ಯವನ್ನು ಸನಾತನ ಸಂಸ್ಥೆಯು ಮಾಡುತ್ತಿದೆ. ಈ ಕಾರ್ಯವು ತುಂಬಾ ಶ್ರೇಷ್ಠವಾಗಿದೆಯೆಂದು ಅವರು ಹೇಳುತ್ತಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿಜಯ ಕುಮಾರರವರು ಧರ್ಮದ ಸಧ್ಯದ ಸ್ಥಿತಿಯನ್ನು ಬದಲಾಯಿಸಲು ಸಮಿತಿಯು ಧರ್ಮಶಿಕ್ಷಣ,ಧರ್ಮರಕ್ಷಣೆ,ಧರ್ಮ ಜಾಗೃತಿ, ರಾಷ್ಟ್ರ ರಕ್ಷಣೆ ಮತ್ತು ಹಿಂದೂ ಸಂಘಟನೆ ಈ ಪಂಚ ಸೂತ್ರಗಳ ಮುಖಾಂತರ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಯತ್ನ ಮಾಡುತ್ತಿದೆ. ಪ್ರತಿಯೊಬ್ಬರೂ ಕೂಡ ಸಮಿತಿಯ ಕಾರ್ಯದಲ್ಲಿ ಸಹಭಾಗಿಯಾಗಬೇಕೆಂದು ಕರೆನೀಡಿದರು.

ಸಭೆಯ ಕೊನೆಯಲ್ಲಿ ಆಶೀರ್ವಚನ ಮಾಡಿದ ಸ್ವಾಮಿಜಿಯವರು ಸಾಧನೆ ಮಾಡಿಸಿ ಸಾಧಕರನ್ನು ತಯಾರು ಮಾಡುವುದು ಸನಾತನ ಸಂಸ್ಥೆಯ ವೈಶಿಷ್ಟ್ಯವಾಗಿದೆ.

ಇಂದು ಮತಾಂತರ , ಭಯೋತ್ಪಾದನೆ , ಲವ್ ಜಿಹಾದ್ , ಗೋಹತ್ಯೆ ಇವು ಹಿಂದೂ ಸಮಾಜದ ಮೇಲೆ ಎರಗಿದ ಕಂಟಕವಾಗಿದೆ. ಹಿಂದೂ ಧರ್ಮ ಪ್ರತೀ ಯೊಬ್ಬರಿಗೆ ಬದುಕಲು ಅವಕಾಶ ನೀಡಿದ ಧರ್ಮವಾಗಿದೆ. ಆದರೂ ಕೂಡ ನಮಗೆ ನಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸಲು ವಿರೋದಿಸಲಾಗುತ್ತಿದೆ. ಶಬರಿಮಲೆ ಪ್ರಕರಣದಲ್ಲಿ ಅನಾದಿ ಕಾಲದಿಂದ ಇದ್ದ ಆಚರಣೆಯನ್ನು ಬದಲಾಯಿಸಲು ನ್ಯಾಯಾಲಯ ಆದೇಶ ನೀಡಿದೆ.

ಆದರೆ ಇತರ ಪಂಥೀಯರಲ್ಲಿ ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ ನೀಡಬೇಕೆಂದು ಅರ್ಜಿ ಧಾಕಲಾದಾಗ ನ್ಯಾಯಾಲಯ ಧಾರ್ಮಿಕ ಸ್ವಾತಂತ್ರ್ಯದ ಕಾರಣಹೇಳಿ ಅರ್ಜಿ ಯನ್ನು ತಿರಸ್ಕರಿಸಿದೆ. ಕೇವಲ ಹಿಂದೂಗಳ ಧಾರ್ಮಿಕ ಆಚರಣೆಗಳನ್ನು ವಿರೋಧಿಸುವ ಈ ವ್ಯವಸ್ಥೆಯನ್ನು ಹಿಂದೂಗಳು ಜಾಗೃತರಾಗಿ ತಡೆದು ಧರ್ಮದ ರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಸ್ವಾಮಿಜಿಯವರ, ಉಪಸ್ಥಿತ ಗಣ್ಯರ ಸತ್ಕಾರವನ್ನು ಮಾಡಲಾಯಿತು. ಕುಮಾರಿ ಸೌಮ್ಯ ರವರು ನಿರೂಪಣೆ ಮಾಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English