ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪಗೆ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.
2011ರ ಜನವರಿ 22 ಯಡಿಯೂರಪ್ಪ ಖುರ್ಚಿಯಿಂದ ಇಳಿದಾಗ ರಾಜಕೀಯ ಪಕ್ಷಗಳು ಬಂದ್ಗೆ ಕರೆ ನೀಡಬಾರದು ಎಂದು ಕೋರ್ಟ್ ತೀರ್ಪು ನೀಡಿತ್ತು.
ಇದರ ನಡುವೆಯೂ ಈಶ್ವರಪ್ಪ ಬಂದ್ಗೆ ಕರೆ ಮಾಡಿದ್ದರು. ಈ ಕಾರಣದಿಂದ ಬಂದ್ ವೇಳೆ ಸುಮಾರು 5 ಕೋಟಿ ನಷ್ಟವುಂಟಾಗಿತ್ತು. ಘಟನೆ ಹಿನ್ನೆಲೆ ಬಂದ್ ಪ್ರಶ್ನೆ ಮಾಡಿ ವಕೀಲ ಧರ್ಮಪಾಲ್ ಖಾಸಗಿ ದೂರು ಸಲ್ಲಿಸಿದ್ದರು.
ಸರ್ಕಾರದ ಬೊಕ್ಕಸಕ್ಕೆ ನಷ್ಟ ಭರಿಸಲು ಈಶ್ವರಪ್ಪರಿಗೆ ನೋಟಿಸ್ ಜಾರಿಮಾಡಲಾಗಿತ್ತು. ಜೊತೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆಯೋ ಸೂಚನೆ ನೀಡಲಾಗಿತ್ತು. ಆದರೆ, ಈಸ್ವರಪ್ಪ ಇದಕ್ಕೆ ಯಾವುದೇ ಸ್ಪಂದನೆ ನೀಡಿರಲಿಲ್ಲ.
ಈ ಎಲ್ಲಾ ಕಾರಣದಿಂದಾಗಿ ಸಿಟಿ ಸಿವಿಲ್ ಕೋರ್ಟ್ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಮಾಡಿ ಆದೇಶ ಹೊರಡಿಸಿದೆ.
Click this button or press Ctrl+G to toggle between Kannada and English