ಬಿಲ್ಲವರ ಯೂನಿಯನ್‌ನ ಮಹಾಸಭೆಯಲ್ಲಿ ಅಸಮಾಧಾನ, ಪೊಲೀಸರಿಂದ ಲಘು ಲಾಟಿ ಪ್ರಹಾರ

7:33 PM, Wednesday, February 22nd, 2012
Share
1 Star2 Stars3 Stars4 Stars5 Stars
(4 rating, 1 votes)
Loading...

Narayan Guru College

ಮಂಗಳೂರು : ಕುದ್ರೋಳಿ ನಾರಾಯಣ ಗುರು ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆದ ಬಿಲ್ಲವರ ಯೂನಿಯನ್‌ನ ಮಹಾಸಭೆಯಲ್ಲಿ ಸಭೆಯ ಬಗ್ಗೆ ಅಸಮಾಧಾನಗೊಂಡಿದ್ದ ಗುಂಪು ಅಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿ ಲಘು ಲಾಟಿ ಪ್ರಹಾರ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದರು.

Narayan Guru College

ಬಿಲ್ಲವರ ಯೂನಿಯನ್‌ನ ಮಹಾಸಭೆಗೆ ಎಲ್ಲಾ ಸದಸ್ಯರುಗಳಿಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ಅಸಮಾಧಾನಗೊಂಡ ಗುಂಪು ಅಕ್ಷೇಪ ವ್ಯಕ್ತಪಡಿಸಿ ಯೂನಿಯನಿನ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅವರು ತಮ್ಮ ಪರವಾಗಿ ಇರುವವರನ್ನು ಮಾತ್ರ ಕರೆದು ಮಹಾಸಭೆ ನಡೆಸುತ್ತಾರೆ. ಮಹಾಸಭೆ ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ರೂ 10.30 ಕ್ಕೆ ಸಭೆ ಆರಂಭಗೊಂಡಿದೆ ಸಭೆಯಲ್ಲಿ ಭಾಗವಹಿಸಲು ಇತರರಿಗೂ ಅವಕಾಶ ನೀಡಬೇಕು ಎಂದು ಪ್ರತಿಭಟಿಸಲು ಆರಂಭಿಸಿದರು. ಮಹಾಸಭೆಯು ಮುಂದುವರಿದಾಗ ಆಕ್ರೋಶಗೊಂಡ ಅಸಮಾಧಾನಿತರ ಗುಂಪು ಸಭಾಂಗಣದೊಳಗೆ ನುಗ್ಗಲು ಪ್ರಯತ್ನಿಸಿತು. ಈ ಸಂದರ್ಭದಲ್ಲಿ ಗೊಂದಲ ವಾತಾವರಣ ನಿರ್ಮಾಣಗೊಂಡು ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸತೊಡಗಿತು. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಅಖೀಲಭಾರತ ಬಿಲ್ಲವರ ಯೂನಿಯನ್‌ನ ಎಲ್ಲಾ ಸದಸ್ಯರಿಗೆ ಮಹಾಸಭೆಗೆ ಆಹ್ವಾನ ಪತ್ರ ಕಳುಹಿಸಲಾಗಿದ್ದು ಅವರೆಲ್ಲರೂ ಹಾಜರಾಗಿದ್ದರು. ನಿಯಮಗಳ ಪ್ರಕಾರ ಸದಸ್ಯರಲ್ಲದವರಿಗೆ ಮಹಾಸಭೆಗೆ ಪ್ರವೇಶ ಇರುವುದಿಲ್ಲ. ಅಜೆಂಡಾದ ಪ್ರಕಾರವೇ ಮಹಾಸಭೆ ನಡೆದಿದೆ. ಅಧ್ಯಕ್ಷರ ಆಯ್ಕೆ ಇಂದಿನ ಅಜೆಂಡಾದಲ್ಲಿ ಇರಲಿಲ್ಲ. ಸಮಿತಿಯನ್ನು ಆಯ್ಕೆಮಾಡಲಾಗಿದೆ ಎಂದು ಯೂನಿಯನ್‌ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English