ಮಂಗಳೂರು: ಮುಂಬೈನಲ್ಲಿ ಮಂಗಳಮುಖಿಯರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳಮುಖಿಯರಿಂದ ಪ್ರತಿಭಟನೆ ನಡೆಯಿತು.
ಮಂಗಳಮುಖಿಯರು ನ್ಯಾಯ ಬೇಕು, ಅಮಾಯಕ ಮಂಗಳಮುಖಿಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಎಂದು ಘೋಷಣೆ ಕೂಗಿದರು.ನಂತರ ಮಂಗಳಮುಖಿಯರು ಮಾತನಾಡಿ, ನಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಇದುವರೆಗೂ ನಾವು ಯಾರಲ್ಲೂ ಹೇಳಿಲ್ಲ. ಆದರೆ ಜನರು ಹಲ್ಲೆ ನಡೆಸುವ ಮಂಚೆ ಯೋಚಿಸಬೇಕು. ಅದು ಯಾವ ಕಾರಣಕ್ಕೆ ಆಗುತ್ತೆ. ಅಲ್ಲಿ ಏನು ತಪ್ಪು ಇದೆ. ಅದನ್ನು ಕೇಳುವುದಕ್ಕೆ ಪೊಲೀಸರು ಇದ್ದಾರೆ. ಕಾನೂನು ಇದೆ. ಹಲ್ಲೆ ನಡೆಸಲು ಇವರು ಯಾರು. ಆ ರೀತಿ ಮಾರಣಾಂತಿಕ ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಸಾಮಾನ್ಯ ಮನುಷ್ಯರು ತಪ್ಪು ಮಾಡಿದಾಗ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ನಮ್ಮ ಮೇಲೆ ಈ ರೀತಿ ಮಾರಣಾಂತಿಕ ಹಲ್ಲೆ ನಡೆಸುತ್ತಾರಲ್ಲ ನಮಗೆ ಮಾನವ ಹಕ್ಕು ಕಾನೂನು ಅನ್ವಯಿಸುವುದಿಲ್ಲವಾ. ನಾವೂ ಭಾರತೀಯರು. ನಾವು ಹೊರಗಿನಿಂದ ಬಂದಿಲ್ಲ. ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದರು.
Click this button or press Ctrl+G to toggle between Kannada and English