ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಭಾರತೀಯ ಜೀವ ವಿಮಾ ನಿಗಮದ ಸಹಯೋಗದೊಂದಿಗೆ ಗುಂಪು ವಿಮೆ ಪ್ರಗತಿ ರಕ್ಷಾ ಕವಚ ಯೋಜನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಸಂಜೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್, ಧರ್ಮಸ್ಥಳದ ಧರ್ಮಾಧಿಕಾರಿಯವರು ನ್ಯಾಯ ದೇವತೆ ಇದ್ದಂತೆ. ಧರ್ಮಸ್ಥಳವು ಒಂದು ಧಾರ್ಮಿಕ ಕ್ಷೇತ್ರವಾಗಿ ಮಾತ್ರ ಪ್ರಸಿದ್ಧವಲ್ಲ. ಶಿಕ್ಷಣ ಕ್ಷೇತ್ರ, ವೈದ್ಯಕೀಯ, ಗ್ರಾಮಾಭಿವೃದ್ಧಿಯ ಮೂಲಕವೂ ಧರ್ಮಸ್ಥಳ ಕ್ಷೇತ್ರ ತನ್ನದೇ ಆದ ರೀತಿಯಲ್ಲಿ ಜನಾನುರಾಗಿ ಕೆಲಸ ಮಾಡುತ್ತಿದೆ ಎಂದರು.
ನಂತರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗಡೆಯವರು ಶಾಸಕರಾದ ಎಸ್.ಅಂಗಾರ, ಲಾಲಜಿ ಆರ್. ಮೆಂಡನ್, ಹರೀಶ್ ಪೂಂಜ, ಸಂಜೀವ ಮಠಂದೂರು ಅವರಿಗೆ ಸನ್ಮಾನಿಸಿದರು. ಕಾರ್ಯಕ್ರಮದ ಕೊನೆಗೆ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸುಮಾರು 4 ಲಕ್ಷ ಸ್ವಸಹಾಯ ಸಂಘಗಳು 40 ಲಕ್ಷ ಕುಟುಂಬಗಳಿಗೆ 10 ಸಾವಿರ ಕೋಟಿ ರೂ. ಸಾಲ ನೀಡುತ್ತಿವೆ. ಆದರೆ ಹಿಂದೆ ಸಾಲ ಪಡೆದಂಥ ಕುಟುಂಬದ ವ್ಯಕ್ತಿ ಮರಣ ಹೊಂದಿದ್ದಲ್ಲಿ ಆ ಸಾಲವನ್ನು ಆ ವ್ಯಕ್ತಿಯ ಸಂಬಂಧಿಗಳು ತೀರಿಸಬೇಕಿತ್ತು. ಇನ್ನು ಮುಂದೆ ಸ್ವಸಹಾಯ ಸಂಘಗಳ ಮೂಲಕ ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ ಅವರು ಪಡೆದ ಸಾಲವನ್ನು ಪ್ರಗತಿ ರಕ್ಷಾ ಕವಚ ಯೋಜನೆಯ ವಿಮಾಧಾರ ಕಂಪನಿ ಜೀವ ವಿಭಾಗ ನಿಗಮ ವಹಿಸಿಕೊಳ್ಳುತ್ತದೆ.
Click this button or press Ctrl+G to toggle between Kannada and English