ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬೇಕು : ಬಿ.ಪಿ.ಹರೀಶ್

6:20 PM, Thursday, February 23rd, 2012
Share
1 Star2 Stars3 Stars4 Stars5 Stars
(4 rating, 1 votes)
Loading...

Yeddyurappa

ಬೆಂಗಳೂರು : ಯಡಿಯೂರಪ್ಪ ಇಂದು ತಮ್ಮ ನಿವಾಸದಲ್ಲಿ ಎಲ್ಲ ಶಾಸಕರು, ಸಚಿವರು, ಸಂಸದರಿಗೆ ಕರೆದ ಔತಣಕೂಟದಲ್ಲಿ ಅವರ ಬಲಗೈಬಂಟ ಶಾಸಕ ಬಿ.ಪಿ.ಹರೀಶ್ ಅವರು ಪಕ್ಷದ ಹಿತದೃಷ್ಟಿಯಿಂದ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ಮಖ್ಯಮಂತ್ರಿಯಾಗಬೇಕು ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ಮತ್ತೆ ಅಂತಃ ಕಲಹ ಆರಂಭಗೊಂಡಂತಾಗಿದೆ.

PB Harish

ಸದಾನಂದ ಗೌಡರಿಂದ ಬಿಜೆಪಿ ಪಕ್ಷ ನಾಶವಾಗುತ್ತಿದೆ. ಬಿಜೆಪಿಯನ್ನು ಒಗ್ಗಟ್ಟಿನಲ್ಲಿಡಲು ಮುಖ್ಯಮಂತ್ರಿಗೆ ಸಾಧ್ಯವಿಲ್ಲ. ಹಾಗಾಗಿ ಪಕ್ಷದ ಹಿತದೃಷ್ಟಿಯಿಂದ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು’ ಡಿ.ವಿ.ಸದಾನಂದ ಗೌಡರು ಜೆಡಿಎಸ್ ಋಣ ತೀರಿಸುತ್ತಿದ್ದಾರೆ. ಅವರೇ ಮುಖ್ಯಮಂತ್ರಿಯಾಗಿ ಮುಂದುವರಿದರೆ ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲದಂತೆ ಆಗುತ್ತದೆ. ಹಾಗಾಗಿ ಪಕ್ಷದ ಭವಿಷ್ಯದ ನಿಟ್ಟಿನಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕತ್ವ ವಹಿಸಿಕೊಳ್ಳಬೇಕು ಹರೀಶ್ ಹೇಳಿರುವುದು ಕುತೂಹಲ ಮೂಡಿಸಿದೆ.

ಮತ್ತೊಮ್ಮೆ ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತುಕೊಳ್ಳಲು ತುದಿಗಾಲ ಮೇಲೆ ನಿಂತಿರುವ ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಬೆಂಬಲಿಗ ಸಚಿವರು, ಶಾಸಕರು ಮತ್ತು ಸಂಸದರ ಸಭೆಯನ್ನು ರೇಸ್‌ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಗುರುವಾರ 12ಗಂಟೆಗೆ ಕರೆದಿದ್ದರು.

ಅಧಿಕಾರಕ್ಕೆ ಪಟ್ಟುಹಿಡಿದಿರುವ ಯಡಿಯೂರಪ್ಪ ಅವರು ಇದಕ್ಕೆ ಪೂರಕವಾಗಿ ಕೆಲ ಕಾರ್ಯತಂತ್ರಗಳನ್ನೂ ಹೆಣೆದಿದ್ದಾರೆ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಕೂಡಲೇ ಬದಲಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಇಂದು ತಮ್ಮ ನಿವಾಸದಲ್ಲಿ ಎಲ್ಲ ಶಾಸಕರು, ಸಚಿವರು, ಸಂಸದರಿಗೆ ಔತಣಕೂಟ ಹಮ್ಮಿಕೊಂಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English