ಪಕ್ಷಕ್ಕೆ ಮರು ಸೇರ್ಪಡೆಯಾಗುತ್ತಿರುವ ಚಂದ್ರಶೇಖರ್ ತೀರ್ಮಾನವನ್ನು ಸ್ವಾಗತಿಸುತ್ತೇನೆ: ಡಿ.ಕೆ.ಸುರೇಶ್

1:10 PM, Thursday, November 1st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

d-k-sureshಬೆಂಗಳೂರು: ಪಕ್ಷಕ್ಕೆ ಮರು ಸೇರ್ಪಡೆಯಾಗುತ್ತಿರುವ ಚಂದ್ರಶೇಖರ್ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ರಾಮನಗರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಅವರನ್ನು ತಮ್ಮ ಸದಾಶಿವನಗರದ ನಿವಾಸದಲ್ಲಿ ಪಕ್ಷಕ್ಕೆ ಮರಳಿ ಬರಮಾಡಿಕೊಂಡು ನಂತರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು. ಚಂದ್ರಶೇಖರ್ ಮೂಲತಃ ಕಾಂಗ್ರೆಸ್ ನವರು. ಬಿಜೆಪಿ ನಾಯಕರ ಧೋರಣೆಯಿಂದ ನೊಂದಿದ್ದಾರೆ. ಪಕ್ಷದ ಬಾವುಟ ಕೊಟ್ಟು ಹೋದವರು ಮತ್ತೆ ಏನಾಯ್ತು ಅಂತ ನೋಡಿಲ್ಲ ಎಂದು ಆರೋಪಿಸಿದರು.

ಮಂಡ್ಯದಲ್ಲಿ ಚುನಾವಣೆ ಮಾಡುವ ಆಸಕ್ತಿ ಅವರಿಗಿದೆ. ಶಿವಮೊಗ್ಗದಲ್ಲಿ ಪುತ್ರ ಇರೋದ್ರಿಂದ ಕೆಲಸ ಮಾಡ್ತಿದ್ದಾರೆ. ಬಳ್ಳಾರಿಯಲ್ಲೂ ಗೆಲ್ಲೋಕೆ ಹೋರಾಡುತ್ತಿದ್ದಾರೆ. ಆದರೆ ರಾಮನಗರದಲ್ಲಿ ಅಸಡ್ಡೆ ತೋರಿದ್ದಾರೆ. ಹೀಗಾಗಿ ಚುನಾವಣಾ ಕಣದಿಂದ ಚಂದ್ರಶೇಖರ್ ಹಿಂದೆ ಸರಿದಿದ್ದಾರೆ ಎಂದರು.

ಚುನಾವಣಾಧಿಕಾರಿಯವರಿಗೂ ಪತ್ರ ನೀಡುತ್ತಿದ್ದಾರೆ. ಈಗಾಗಲೇ ಈಮೇಲ್ ಮಾಡಿದ್ದಾರೆ. ಇದೀಗ ಪತ್ರವನ್ನ ಚುನಾವಣಾಧಿಕಾರಿಗೆ ನೀಡುತ್ತಿದ್ದಾರೆ. ಕುಟುಂಬ ಒಡೆದು ರಾಜಕಾರಣ ಮಾಡುವುದೇ ಅವರ ಉದ್ದೇಶ. 7 ರಂದು ಹೊಸ ಸರ್ಕಾರ ರಚನೆ ಅಂತ ಹೇಳಿದ್ದಾರೆ. ಚಂದ್ರಶೇಖರ್ ಅವರೇ ಅದನ್ನ ಬಾಯ್ಬಿಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಕೆಡವಲು ಷಡ್ಯಂತ್ರ ನಡೆಸಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರೇ ಹೇಳಬೇಕು ಎಂದು ಡಿ ಕೆ ಸುರೇಶ್ ಆಗ್ರಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English