ಮೈಸೂರಲ್ಲಿ ಇಬ್ಬರು ಅಂತಾರಾಜ್ಯ ಕಳ್ಳಿಯರ ಬಂಧನ: 244 ಗ್ರಾಂ. ಚಿನ್ನಾಭರಣ ವಶ

2:13 PM, Thursday, November 1st, 2018
Share
1 Star2 Stars3 Stars4 Stars5 Stars
(No Ratings Yet)
Loading...

mysuruಮೈಸೂರು: ಇಬ್ಬರು ಅಂತಾರಾಜ್ಯ ಕಳ್ಳಿಯರನ್ನು ಬಂಧಿಸಿ ಅವರಿಂದ 7.30 ಲಕ್ಷ ರೂ. ಮೌಲ್ಯದ 244 ಗ್ರಾಂ. ಚಿನ್ನಾಭರಣ ಮತ್ತು 45,050 ರೂ. ನಗದನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ವೆಲೂರು ಜಿಲ್ಲೆಯ ಜೋಲಾರ್‌ಪೇಟೆ ಪಟ್ಟಣದ ಬಾಬುನಗರದ ನಿವಾಸಿಗಳಾದ ಉಷಾರಾಣಿ (40), ರೂಪ(24) ಬಂಧಿತರು. ದಸರಾ ಮಹೋತ್ಸವದ ಅವಧಿಯಲ್ಲಿ ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಈ ವೇಳೆ ರಾಜ್ಯ ಹಾಗೂ ಹೊರ ರಾಜ್ಯದ ಪಿಕ್‌ಪಾಕೆಟ್ ಕಳ್ಳರು ಮೈಸೂರಿಗೆ ಆಗಮಿಸಿ ಅಪರಾಧವೆಸಗುತ್ತಾರೆ. ಇದನ್ನು ತಡೆಯಲು ಮತ್ತು ಪತ್ತೆಗೆ ಪೊಲೀಸ್ ಆಯುಕ್ತರು, ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಒಂದು ವಿಶೇಷ ತಂಡವನ್ನು ರಚಿಸಿದ್ದರು.

ತಂಡವು ಅ.25 ರಂದು ಕೆಎಸ್‌ಆರ್‌ಟಿಸಿ ನಗರದ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ ಉಷಾರಾಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮತ್ತೋರ್ವಳ ಕೈಚಳಕವನ್ನು ಬಾಯ್ಬಿಟ್ಟಿದ್ದಳು. ಪಿಕ್‌ಪಾಕೆಟ್ ಮತ್ತು ಮಹಿಳೆಯರ ಬ್ಯಾಗ್‌ನಿಂದ ನಗದು, ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಳು. ಅ.30 ವಿಜಯನಗರ ಲಾಡ್ಜ್‌ವೊಂದರಲ್ಲಿ ರೂಪಳನ್ನು ಬಂಧಿಸಿ, ಪ್ರಕರಣಗಳಿಗೆ ಸಂಬಂಧಪಟ್ಟಂತೆ ರೂ. 7.30 ಮೌಲ್ಯದ 244 ಗ್ರಾಂ ಚಿನ್ನಾಭರಣ, 45,050 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪತ್ತೆ ಕಾರ್ಯದಿಂದ ಮೈಸೂರು ನಗರ ದೇವರಾಜ ಪೊಲೀಸ್ ಠಾಣೆಯಲ್ಲಿ 2, ಲಷ್ಕರ್ ಠಾಣೆಯ1 ಹಾಗೂ ಕುವೆಂಪುನಗರ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣಗಳು ಪತ್ತೆಯಾಗಿವೆ. ಆರೋಪಿ ಉಷಾರಾಣಿಯನ್ನು ಜುಲೈ ತಿಂಗಳಿನಲ್ಲಿ ಬೆಂಗಳೂರಿನ ಆರ್‌ ಎಂ. ಯಾರ್ಡ್‌ನ ಪೊಲೀಸರು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿದ್ದರು. ಬಳಿಕ ಈಕೆ ಜಾಮೀನಿನ ಮೇಲೆ ಹೊರಬಂದು ಮತ್ತೆ ನಗರದಲ್ಲಿ ಕಳ್ಳತನ ಮುಂದುವರಿಸಿರುವುದು ಬೆಳಕಿಗೆ ಬಂದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English