ನವದೆಹಲಿ: ರಫೇಲ್ ಡೀಲ್ನಲ್ಲಿ ಭ್ರಷ್ಟಾಚಾರ ನಡೆದಿದೆ, ಇದಕ್ಕೆ ಪ್ರಧಾನಿಯೇ ನೇರಹೊಣೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇವತ್ತು ಸುದ್ದಿಗೋಷ್ಠಿ ನಡೆಸಿ ಮತ್ತೊಂದು ಆರೋಪ ಮಾಡಿದ್ದಾರೆ.
ಅನಿಲ್ ಅಂಬಾನಿ ಅವರು ಜಮೀನು ಹೊಂದಿರುವ ಏಕೈಕ ಕಾರಣಕ್ಕೆ ಡಸಾಲ್ಟ್ ಸಬ್ ಕಾಂಟ್ರಾಕ್ಟ್ ನೀಡಿದೆ ಎಂದು ಕಂಪನಿ ಸಿಇಒ ಹೇಳಿಕೆ ನೀಡಿದ್ದಾರೆ. ಆದರೆ ಇಲ್ಲೇ ಇರುವುದು ವಿಷಯ. ಅನಿಲ್ ಅಂಬಾನಿ ಡಸಾಲ್ಟ್ನಿಂದಲೇ ಹಣ ಪಡೆದು ಜಮೀನು ಖರೀದಿಸಿದ್ದಾರೆ.
8 ಲಕ್ಷ ಮೌಲ್ಯದ ಲಾಸ್ ನಲ್ಲಿರುವ ಕಂಪನಿಯೊಂದಕ್ಕೆ 284 ಕೋಟಿ ರೂ. ಹೂಡಿಕೆ ಮಾಡಿದೆ. ಇದೇ ಹಣದಿಂದಲೇ ಅನಿಲ್ ಅಂಬಾನಿ ಜಮೀನು ಖರೀದಿ ಮಾಡಿದ್ದಾರೆ. ಅಂದರೆ ಡಸಾಲ್ಟ್ ಸಿಇಒ ಸುಳ್ಳು ಹೇಳುತ್ತಿದ್ದಾರೆ ಎಂಬುದು ಕ್ಲಿಯರ್ ಆದಂತಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಫೇಲ್ ಡೀಲ್ ಇದು ಓಪನ್ ಶ್ಯೂಟ್ ಕೇಸ್, ಇದು ಪಿಎಂ ಮೋದಿ ಅವರ ಸಹಭಾಗಿತ್ವ ಇದೆ. ರಫೇಲ್ ಡೀಲ್ನಲ್ಲಿ ವಿಶೇಷ ಆಸಕ್ತಿ ವಹಿಸಿದ ಪ್ರಧಾನಿ ರಕ್ಷಣಾ ಸಚಿವರಿಗೂ ಗೊತ್ತಿಲ್ಲದೇ ಡೀಲ್ ಮುಗಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Click this button or press Ctrl+G to toggle between Kannada and English