ಈ ಬಾರಿಯ ದೀಪಾವಳಿಗೆ ಮಂಗಳೂರಿಗೆ ಬಂದಿದೆ ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳು

5:13 PM, Saturday, November 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

VivekTradersಮಂಗಳೂರು  : ದೀಪಗಳ ಹಬ್ಬ ದೀಪಾವಳಿಗೆ ಇನ್ನೇನೂ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದ್ದು, ಎಲ್ಲರ ಮನೆಯನ್ನೂ ಬೆಳಗಿಸಲೂ ಇದೀಗ ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳು ವಿಶಿಷ್ಟ ಚಿತ್ತಾರದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮನೆಯಲ್ಲೆ ತಯಾರಿಸಬಹುದಾದ ಈ ಆಕಾಶ ಬುಟ್ಟಿಯನ್ನು ನಾವು ಇಲ್ಲಿಯವೆರೆಗೆ ಚೀನಾದಿಂದ ಖರೀದಿ ಮಾಡಿಕೊಳ್ಳಬಹುದಾದ ಪರಿಸ್ಥಿತಿ ಬಂದೊಂದಗಿತ್ತು!! ಆದರೆ ಈ ಬಾರಿ ಚೀನಾದ ಆಕಾಶ ಬುಟ್ಟಿಗೆ ಗುಡ್ ಬೈ ಹೇಳುವ ಸಂದರ್ಭ ಬಂದಿದ್ದು ಸಮರ್ಪಣಾ ಟ್ರಸ್ಟ್ ನಿಂದ ಮಾರುಕಟ್ಟೆಗೆ ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನು ಪರಿಚಯಿಸಿದ್ದಾರೆ.

ಇಲ್ಲಿಯರೆಗೆ ಚೀನಾದ ಆಕಾಶ ಬುಟ್ಟಿಗಳಿಂದ ಮಿನುಗುತ್ತಿದ್ದ ನಮ್ಮ ಮನೆಗಳೆಲ್ಲಾ ಈ ಬಾರಿ ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳಿಂದ ಜಗಮಗಿಸಲಿದ್ದು ಇದಕ್ಕೆ ಬಾಲಾಪರಾದಿಗಳನ್ನು ಬಳಸಿಕೊಳ್ಳಲಾಗಿದೆ ಎಂಬುವುದೇ ವಿಶೇಷ. ಇಂತಹ ಮಕ್ಕಳಿಗೆ ದೀಪಾಳಿಯ ಸುಸಂದರ್ಭದಲ್ಲಿ ಹೊಸ ಜೀವನ ರೂಪಿಸಲು ಅವಕಾಶಕೊಟ್ಟಂತಾಗಿದೆ.

Vivek Traders ಚೀನಾದಿಂದ ಬರುವ ಗೂಡು ದೀಪಗಳಿಗೆ ಲೆಕ್ಕವಿಲ್ಲದಷ್ಟು ವಿನ್ಯಾಸದ ವಿವಿಧ ಬಣ್ಣ, ಆಕಾರಗಳಲ್ಲಿ ಸಿಗುವ ಗೂಡು ದೀಪಗಳು ಅನೇಕರ ಆಕರ್ಷಣೆಯಾಗಿತ್ತು. ಆದರೆ ಈ ಬಾರಿ ಇಲ್ಲಿ ತಯಾರಿಸಿದ ಪ್ರತಿ ಲ್ಯಾಂಟರ್ನ್‍ಗಳನ್ನು 36 ಕಡ್ಡಿ ಹಾಗೂ ವರ್ಣರಂಜಿತ ಬಟ್ಟೆಗಳಿಂದ ಇದನ್ನು ತಯಾರಿಸಲಾಗಿದ್ದು ಇದರ ವೆಚ್ಚ ಕೇವಲ 300 ರೂಪಾಯಿ ಮಾತ್ರ. ಚೀನಾದ ಆಕಾಶ ದೀಪಕ್ಕೆ ಗುಡ್‍ಬೈ ಹೇಳುತ್ತಾ 100% ಶುದ್ಧ ಭಾರತೀಯರು ಮಾಡಿದ ಆಕಾಶ ದೀಪವನ್ನು ಮನೆಯಲ್ಲಿ ಬೆಳಗಲು ಮುಂದಾಗಿ ಈ ಬಾರಿಯ ದೀಪದ ಹಬ್ಬವನ್ನು ಮತ್ತಷ್ಟು ವರ್ಣರಂಜಿತವಾಗಿಸೋಣ.

ಇದೀಗ ಇಂತಹ ವಿಶಿಷ್ಟ ಆಕಾಶ ಬುಟ್ಟಿಗಳು ಮಂಗಳೂರಿನಲ್ಲಿರುವ ವಿವೇಕ್ ಟ್ರೇಡರ್ಸ್, ಮಂಗಳೂರು ಧ್ವನಂತರಿ ನಗರ, ವಿಟೋಬ ದೇವಸ್ಥಾನ ರಸ್ತೆ ಇಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9008416493

Vivek Traders

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English