ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ ಮಂಗಳೂರು ಉಡುಪಿ ಬಹುತೇಕ ಯಶಸ್ವೀ

8:20 PM, Wednesday, February 29th, 2012
Share
1 Star2 Stars3 Stars4 Stars5 Stars
(3 rating, 1 votes)
Loading...

Trade Strike

ಮಂಗಳೂರು : ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ದೇಶವ್ಯಾಪಿ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಮುಂಜಾನೆ ಕೆಲವು ಸರಕಾರಿ ಹಾಗೂ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದ ವೇಳೆ ಅವುಗಳ ಮೇಲೆ ಕಲ್ಲುತೂರಾಟ ನಡೆಸಿದ ಘಟನೆಗಳು ಸಂಭವಿಸಿದೆ. ಲಾಲ್‌ಬಾಗ್‌, ಕರಂಗಲ್ಪಾಡಿ, ಅಡ್ಯಾರ್‌, ಕಣ್ಣೂರು, ಪಡೀಲ್‌ಗ‌ಳಲ್ಲಿ ಸರಕಾರಿ ಬಸ್‌ಗಳ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಗಾಜುಗಳಿಗೆ ಹಾನಿಯಾಗಿದೆ. ಲಾಲ್‌ಬಾಗ್‌, ಪಿವಿಎಸ್‌ ವೃತ್ತ,, ಫಳ್ನೀರ್‌ ಮುಂತಾದ ಕಡೆಗಳಲ್ಲಿ ಕಲ್ಲುತೂರಾಟದಿಂದ ಕೆಲವು ಖಾಸಗಿ ಬಸ್‌ಗಳು ಹಾನಿಗೊಂಡಿವೆ.

Trade Strike

ಘಟನೆಯ ಬಳಿಕ ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಸರ್ವಿಸ್‌, ಎಕ್ಸ್ ಪ್ರಸ್‌ ಹಾಗೂ ಸಿಟಿಬಸ್‌ಗಳು ಸಂಚಾರ ನಡೆಸಲಿಲ್ಲ. ಸರಕಾರಿ ಬಸ್‌ಗಳ ಓಡಾಟ ವಿರಳವಾಗಿತ್ತು. ನಗರದ ಕೇಂದ್ರ ಸರ್ವಿಸ್‌ ಬಸ್‌ ನಿಲ್ದಾಣ ಹಾಗೂ ಸ್ಟೇಟ್‌ಬ್ಯಾಂಕಿನ ಸಿಟಿ ಬಸ್‌ ನಿಲ್ದಾಣಗಳು ವಾಹನ ಸಂಚಾರವಿಲ್ಲದೆ ಶಾಂತವಾಗಿತ್ತು.

ಉಡುಪಿ ಬಸ್‌ ಹಾಗೂ ರಿಕ್ಷಾ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಕೆಲವು ಅಂಗಡಿ ಮುಂಗಟ್ಟುಗಳು, ಹೊಟೇಲ್‌ಗ‌ಳು ತೆರೆದಿದ್ದವು. ಶಾಲಾ ಕಾಲೇಜುಗಳು ಬಸ್ಸ್ ಸಂಚಾರವಿಲ್ಲದೆ ಕಾರ್ಯಾಚರಿಸಿರಲಿಲ್ಲ. ಸರಕಾರಿ ಕಚೇರಿಗಳು ತೆರೆದಿದ್ದರೂ ಹಾಜರಾತಿ ಕಡಿಮೆಯಿತ್ತು. ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಚ್ಚಿನ ಶಾಖೆಗಳಲ್ಲಿ ವ್ಯವಹಾರ ಸ್ಥಗಿತಗೊಂಡಿತ್ತು. ಖಾಸಗಿ ಬ್ಯಾಂಕ್‌ಗಳು ತೆರೆದಿದ್ದವು. ರೈಲು ಸಂಚಾರದಲ್ಲಿ ವ್ಯತ್ಯಯ ಕಂಡುಬರಲಿಲ್ಲ. ಸರಕಾರಿ ಬಸ್‌ಗಳು ಎಂದಿನಂತೆ ಸೇವೆ ಸಲ್ಲಿಸಿ ಅಗತ್ಯದ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸಿದವು.

Trade Strike

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಅಶ್ರಯದಲ್ಲಿ ವಿವಿಧೆಡೆಗಳಲ್ಲಿ ಪ್ರತಿಭಟನಾ ಸಭೆಗಳು ನಡೆದವು. ಮಂಗಳೂರಿನ ಪುರಭವನದ ಮುಂಭಾಗದಲ್ಲಿ ಜರಗಿದ ಸಭೆಯಲ್ಲಿ ಸಿಐಟಿಯು, ಎಐಟಿಯುಸಿ, ಬಿಎಂಎಸ್‌, ಎಚ್‌ಎಂಎಸ್‌, ಇಂಟಕ್‌, ಬ್ಯಾಂಕ್‌ ನೌಕರರರ ಸಂಘಟನೆಗಳು, ಡಿವೈಎಫ್‌ಐ, ವಿಮಾ ನೌಕರರ ಸಂಘಟನೆಗಳು, ಬಿಎಸ್‌ಎನ್‌ಎಲ್‌, ಅಂಚೆ ನೌಕರರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ಸಿಐಟಿಯು ನಾಯಕ ಬಿ. ಮಾಧವ, ಬಿಎಂಎಸ್‌ ನಾಯಕ ವಿಶ್ವನಾಥ ಶೆಟ್ಟಿ, ಇಂಟಕ್‌ ನಾಯಕ್‌ ಶಶಿರಾಜ ಅಂಬಟ್‌, ಎಐಟಿಯುಸಿ ಮುಖಂಡ ಎಚ್‌.ವಿ. ರಾವ್‌ ಮುಂತಾದವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಬೆಲೆ ಏರಿಕೆ ನಿಯಂತ್ರಣ, ಉದ್ಯೋಗ ಸೃಷ್ಟಿ, ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟಿನ ಅನುಷ್ಠಾನ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ಧತಿ ಮುಂತಾದ ಬೇಡಿಕೆಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಮುಷ್ಕರವನ್ನು ಯಶಸ್ವಿಗೊಳಿಸಿರುವ ಕಾರ್ಮಿಕರು ಹಾಗೂ ಬೆಂಬಲ ವ್ಯಕ್ತಪಡಿಸಿದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದವರು ಹೇಳಿದರು.

Trade Strike

ಉಡುಪಿಯಲ್ಲಿಯೂ ಪ್ರತಿಭಟನಾ ಮೆರವಣಿಗೆ ನಡೆಯಿತು. ಜಂಟಿ ಸಮಿತಿ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ, ಸಿಐಟಿಯುನ ವಿಶ್ವನಾಥ ರೈ, ಕೃಷಿಕೂಲಿಕಾರರ ಸಂಘದ ದೋಗು ಸುವರ್ಣ, ಎಐಟಿಯುಸಿಯ ಕೆ.ವಿ.ಭಟ್‌, ಸಂಜೀವ ಶೇರಿಗಾರ್‌, ಬಿಎಂಎಸ್‌ನ ಬಾಲಗಂಗಾಧರ, ಬ್ಯಾಂಕ್‌ ನೌಕರರ ಒಕ್ಕೂಟದ ಯು.ಶಿವರಾಯ, ವಿಮಾ ನೌಕರರ ಸಂಘದ ಯು.ಗುರುದತ್‌, ಪ್ರಭಾಕರ ಕುಂದರ್‌, ಕಮಲಾಕ್ಷ ಕಾಮತ್‌, ಬಿಎಸ್ಸೆನ್ನೆಲ್‌ ನೌಕರರ ಸಂಘದ ಶಶಿಧರ ಗೊಲ್ಲ, ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಪರವಾಗಿ ಮಧುಸೂದನ ಹೇರೂರು ಮೊದಲಾದವರು ನೇತೃತ್ವ ವಹಿಸಿದ್ದರು.

ಉಳಿದಂತೆ ಬೆಳ್ತಂಗಡಿ, ಪುತ್ತೂರು, ಸುಳ್ಯ, ಮೂಡಬಿದಿರೆ, ಕುಂದಾಪುರ, ಕಾರ್ಕಳ ತಾಲೂಕಿನಲ್ಲಿ ಬಹುತೇಕ ಯಶಸ್ವಿಯಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English