ಸಮಾರಂಭದಲ್ಲಿ ರೇವಣ್ಣನ ಹಾಡಿ ಹೊಗಳಿದ ಜಯಮಾಲ

11:18 AM, Monday, November 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

jayamalaಹಾಸನ: ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಯನ್ನು ಜೈನಕಾಶಿಯ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀಯವರಿಗೆ ಪ್ರದಾನ ಮಾಡಲಾಯ್ತು.

ಕರ್ನಾಟಕ ಸರ್ಕಾರದ ಪರವಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಜಯಮಾಲಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಸೇರಿ ಹಲವು ಗಣ್ಯರು ಪ್ರಶಸ್ತಿಯನ್ನ ಪ್ರಧಾನ ಮಾಡಿದರು. ಈ ವೇಳೆ ಸಚಿವೆ ಜಯಮಾಲಾ ರೇವಣ್ಣನನ್ನ ಹಾಡಿ ಹೊಗಳಿದ ಘಟನೆ ಕೂಡಾ ನಡೆಯಿತು.

ಹೆಚ್.ಡಿ.ರೇವಣ್ಣನವರು ಹಿಡಿದ ಕೆಲಸವನ್ನ ಎಂದು ಬಿಡುವವರಲ್ಲ. ಅದು ಯಾವುದೇ ಸರ್ಕಾರವಿದ್ರು ಕೂಡಾ ಅಭಿವೃದ್ಧಿಯ ಪರವಾದ ಕೆಲಸವನ್ನು ಜಿಲ್ಲೆಗೆ ತರುವುದರಲ್ಲಿ ನಿಸ್ಸೀಮರು. ಮಹಿಳೆ, ಮಕ್ಕಳ ಬಗ್ಗೆ, ಮನುಷ್ಯರ ಸಂಬಂಧಗಳ ಬಗ್ಗೆ ಜೊತೆಗೆ ಧರ್ಮ ಕರ್ಮಗಳನ್ನ ಜೊತೆಯಲ್ಲಿಟ್ಟುಕೊಂಡು ಬದುಕುವಂತಹ ಮಂದಿ ಜೀವನದಲ್ಲಿ ಎಂದು ಸೋಲುವುದಿಲ್ಲ. ಇಂದು ನಾಡಿಗೆ ನಾಡೇ ಹೇಳುತ್ತೆ ರೇವಣ್ಣ ಬದುಕಿರುವವರೆಗೂ ಅವರು ಎಂಎಲ್ಎ ಆಗಿಯೇ ಇರ್ತಾರೆ ಅಂತ ಅದು ನನ್ನ ಭಾವನೆ ಎಂದರು.

ಅವರು ದೇವರನ್ನ ನಂಬಿ ಬದುಕು ನಡೆಸುತ್ತಿದ್ದಾರೆ. ಹಾಗಾಗಿ ನಾನು ಅವರನ್ನ ಸದಾ ಕಾಲ ಹೀಗೇ ಬದುಕಿ ಎಂದು ಹಾರೈಸುತ್ತೇನೆ ಎಂದರು. ಈ ಮಾತನ್ನ ಕೇಳಿ ಕೆಲ ಸಭಿಕರು ಚಪ್ಪಾಳೆ ಹೊಡೆದ್ರೆ, ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರು ಮೂಗು ಮುರಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English