ಮಂಗಳೂರು : ಚಿನ್ನಾಭರಣ ಮಳಿಗೆಯ 1ಕೋಟಿ 75 ಲಕ್ಷ ವಶ, ಇಬ್ಬರ ಬಂಧನ

7:15 PM, Monday, November 5th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

police commissioner ಮಂಗಳೂರು : ಕಾರ್ ಸ್ಟ್ರೀಟ್ ನ ವೈಷ್ಣವಿ ಆಭರಣಗಳ ಮಳಿಗೆ ಮಾಲಕರಿಗೆ ಸೇರಿದ 1ಕೋಟಿ 75 ಲಕ್ಷ ರೂಪಾಯಿ ಹಣ ದರೋಡೆ ಪ್ರಕರಣಕ್ಕೆ ಸಂಭಂದಿಸಿದ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸ್, ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಅಕ್ಟೋಬರ್ 26 ರಂದು ಮುಂಬೈಯಿಂದ ಮಂಗಳೂರಿಗೆ ಚಿನ್ನಾಭರಣ ಮಾರಿ ಹಣ ತರುತ್ತಿದ್ದ ವೇಳೆ  ಮಂಗಳೂರಿನ ಲೇಡಿಹಿಲ್ ನಲ್ಲಿ  ಮಂಜುನಾಥ್ ಗಣಪತಿ ಎಂಬುವವರನ್ನು ಬೆದರಿಸಿ ಚಿನ್ನಾಭರಣಗಳ ಮಳಿಗೆ ಕೆಲಸದಾಳುವಾಗಿದ್ದ ಮಂಜುನಾಥ್ ಮತ್ತು ಇತರರು ಹೊಂಚು ಹಾಕಿ ಕುಳಿತು 1ಕೋಟಿ 75 ಲಕ್ಷ ರೂಪಾಯಿ ದರೋಡೆ ಮಾಡಿದ್ದರು.

police commissioner ಮಂಜುನಾಥ್ ಗಣಪತಿ ಎಂಬುವವರು ನೀಡಿದ್ದ ದೂರಿನ ಮೇಲೆ ಕಾರ್ಯಾಚರಣೆ  ನಡೆಸಿದ ಉರ್ವ ಪೊಲೀಸ್ ಮತ್ತು  ಸಿಸಿಬಿ ಪೊಲೀಸರ ತಂಡ ಅಬ್ದುಲ್ ಮನ್ನಾನ್ ( 29), ರಾಝಿ ( 26)  ಎಂಬವರನ್ನು ಬಂಧಿಸಿ ನಗದು ಹಾಗೂ ಇನ್ನೋವಾ ಕಾರನ್ನು   ವಶಕ್ಕೆ ಪಡೆ ದಿದ್ದಾರೆ.

ಕಾರ್ ಸ್ಟ್ರೀಟ್ ನ ವೈಷ್ಣವಿ ಆಭರಣಗಳ ಮಳಿಗೆ ಸಂತೋಷ್ ಎಂಬವರಿಗೆ ಸೇರಿದ್ದಾಗಿದೆ.

ದರೋಡೆ ಪ್ರಕರಣದಲ್ಲಿ ಒಟ್ಟು ಆರು ಜನರಿದ್ದು ತಂಡದ ಇಬ್ಬರನ್ನು ಬಂಧಿಸಲಾಗಿದ್ದು ಇನ್ನುಳಿದ ನಾಲ್ವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮಂಗಳೂರು  ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್  ಪತ್ರಕರ್ತರಿಗೆ ತಿಳಿಸಿದ್ದಾರೆ .

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English