ಮಂಗಳೂರು: ನಗರದ ಹೊರವಲಯದಲ್ಲಿರುವ ಎಂಆರ್ಪಿಎಲ್ನ ವಿಸ್ತರಣಾ ಯೋಜನೆಯನ್ನು ತಡೆಹಿಡಿಯಲು ಇಂದು ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ವಿವಿಧ ಸಂಘಟನೆಗಳಿಂದ ಹಾಗೂ ಭೂಮಾಲೀಕರಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಹೋರಾಟ ಸಮಿತಿಯ ಸದಸ್ಯ ವಿಲಿಯಮ್ ಮಾತನಾಡಿ, ಎಂಆರ್ ಪಿಲ್ ಕಂಪನಿಯ ವಿಸ್ತರಣಾ ಯೋಜನೆಯ ವಿರುದ್ಧ ಹೋರಾಟವನ್ನು ಜನರ ಮನಸ್ಸಿಗೆ ಮುಟ್ಟುವ ಹಾಗೆ ಹಾಗೂ ಅಧಿಕಾರಿಗಳಿಗೆ ಮುಟ್ಟುವ ಹಾಗೆ ಕೈಗೊಂಡಿದ್ದೇವೆ. ಈ ಹೋರಾಟ ಇವತ್ತು ಮಾತ್ರವಲ್ಲ, ಮುಂದೆ ಕೂಡಾ ಮುಂದುವರಿಯುತ್ತದೆ.
ಹಿಂದೆ ನಮ್ಮ ಹೋರಾಟ ಏನಿದ್ದರೂ ನಮ್ಮ ಗದ್ದೆಗಳಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ ಇಂದಿನ ಈ ಹೋರಾಟ ನಮ್ಮ ಭೂಮಿಯ ಉಳಿವಿಗಾಗಿ. ನಾವು ನಮಗೆ ಮಾತ್ರ ಅನ್ನಕ್ಕಾಗಿ ಕೃಷಿ ಮಾಡುವವರಲ್ಲ. ಇಡೀ ದೇಶಕ್ಕೆ ಅನ್ನ ಕೊಡುವ ಉದ್ದೇಶದಿಂದ ನಾವು ಕೃಷಿ ಮಾಡುತ್ತಿದ್ದೇವೆ. ನಾವು ಯಾವ ಕಾರಣಕ್ಕೂ ನಮ್ಮ ಭೂಮಿಯನ್ನು ಬಿಟ್ಟುಕೊಡಲು ಸಾಧ್ಯವೇ ಇಲ್ಲ. ಈ ಹೋರಾಟವನ್ನು ಯಾವ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಟಿ.ಆರ್.ಭಟ್, ವಿದ್ಯಾ ದಿನಕರ್, ಭೂಮಾಲೀಕರು ಹಾಗೂ ವಿವಿಧ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.
Click this button or press Ctrl+G to toggle between Kannada and English