ಕೊಡಗು ಸಭೆಯಲ್ಲಿ ಪ್ರವಾದಿ ನಿಂದನೆ  ನವೆಂಬರ್ 16 ರಂದು ಮಂಗಳೂರಲ್ಲಿ ಪ್ರತಿಭಟನೆ

12:03 AM, Saturday, November 10th, 2018
Share
1 Star2 Stars3 Stars4 Stars5 Stars
(No Ratings Yet)
Loading...

asraf kಮಂಗಳೂರು  : ಇತ್ತೀಚೆಗೆ ಕೊಡಗುವಿನ ಗೋಣಿ ಕೊಪ್ಪಲುವಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ಒಂದರಲ್ಲಿ ಸಂತೋಷ ತಮ್ಮಯ್ಯ ಎಂಬ ಅಂಕಣಕಾರರೊಬ್ಬರು ಪ್ರವಾದಿ ಮಹಮ್ಮದ್ ರವರ ಜೀವನವನ್ನು ಪ್ರಸ್ತಾವಿಸಿ ಪ್ರವಾದಿವರ್ಯರು ಧಾರ್ಮಿಕ ಭಯೋತ್ಪಾದನೆಗೆ ಉತ್ತೇಜಿಸಿರುವುದಾಗಿ ಅವಹೇಳನಕಾರಿ ಹೇಳಿಕೆ ನೀಡಿ ಮತೀಯ ಉದ್ವಿಗ್ನತೆ ಸೃಷ್ಟಿಸಿ ಕೋಮುಗಲಭೆಯನ್ನುಂಟು ಮಾಡುವ ಹೀನ ಕೃತ್ಯವನ್ನು ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಮತ್ತು ಕೃತ್ಯಕ್ಕೆ ಕಾರಣವಾದ ವ್ಯಕ್ತಿಯನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದ.ಕ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ, ನವೆಂಬರ್ 16 ರಂದು ಮಂಗಳೂರಿನಲ್ಲಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ಆಯೋಜಿಸಲು ನಿರ್ಧರಿಸಿರುತ್ತದೆ ದ.ಕ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English