ಛತ್ತೀಸ್ಗಢ: ಈಗಾಗಲೇ ಛತ್ತೀಸ್ಗಢದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲಿಯೇ ಅಯೋಧ್ಯೆಯಲ್ಲಿ ರಾಮಮಂದಿರವನ್ನ ನಿರ್ಮಾಣ ಮಾಡಲಾಗುವುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘೋಷಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗಾಗಿ ಪ್ರಚಾರ ಕಾರ್ಯ ಕೈಗೊಂಡಿರುವ ಅವರು, ಇಂದು ಛತ್ತೀಸ್ಗಢದ ಲೊರ್ಮಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುವುದು. ಅಂತೆಯೇ ಛತ್ತೀಸ್ಗಢದಲ್ಲಿ ಈಗಾಗಲೇ ರಾಮಮಂದಿರ ನಿರ್ಮಾಣ ಮಾಡಲಾಗಿದೆ ಎಂದು ನೆನಪಿಸಿಕೊಂಡರು. ಇದೇ ವೇಳೆ, ಪಕ್ಷ ಮತ್ತೆ ದಿಗ್ವಿಜಯ ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಛತ್ತೀಸ್ಗಢದ ಜಾರ್ಖಂಡ್ ಸೇರಿ ಈಶಾನ್ಯ ರಾಜ್ಯಗಳು, ಕಾಶ್ಮೀರದಲ್ಲಿ ಕಾಂಗ್ರೆಸ್ ರಾಜಕೀಯದಾಟ ಆಡುತ್ತಿದೆ. ರಾಜಕೀಯ ಲಾಭಕ್ಕಾಗಿ ದೇಶದ ಭದ್ರತೆ ವಿಚಾರದಲ್ಲಿಯೂ ಆಟವಾಡುತ್ತಿದೆ. ತನ್ನ ಸ್ವಾರ್ಥಕ್ಕಾಗಿ ಇಲ್ಲಿ ನಕ್ಸಲಿಸಂ ಬೆಳೆಸಿದೆ. ಆದರೆ ದೇಶದ ಭದ್ರತೆಯೇ ಬಿಜೆಪಿ ಮೊದಲ ಆದ್ಯತೆಯಾಗಿದ್ದು, ಜನರ ಆತಂಕಗಳನ್ನು ದೂರ ಮಾಡಲು ಕಠಿಣ ಕ್ರಮಗಳ್ನು ಕೈಗೊಂಡಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಸಿಎಂ ರಮಣ್ ಸಿಂಗ್ ಅವರು ನಾಮಪತ್ರ ಸಲ್ಲಿಸುವಾಗ ಸಾಥ್ ನೀಡಿದ ಅವರು, ಆಶೀರ್ವಾದ ನೀಡಿದರು.
ಮತ್ತೊಂದೆಡೆ ರಾಯಪುರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ಶಾ ಹಾಗೂ ಛತ್ತೀಸ್ಗಢ ಸಿಎಂ ರಮಣ್ ಸಿಂಗ್ ಅವರು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ನಕ್ಸಲರ ಕಾಟದ ನಡುವೆಯೂ ರಮಣ್ ಸಿಂಗ್ 15 ವರ್ಷಗಳಿಂದ ರಾಜ್ಯದ ಅಭಿವೃದ್ಧಿ ಶ್ರಮಿಸಿದ್ದಾರೆ. ಕೌಶಲ ಅಭಿವೃದ್ಧಿಗಾಗಿ ಕಾನೂನು ಜಾರಿ ಮಾಡಿದ ದೇಶದ ಮೊದಲ ರಾಜ್ಯ ಛತ್ತೀಸ್ಗಢ ಎಂದು ಅಮಿತ್ ಶಾ ಹೊಗಳಿದರು.
Click this button or press Ctrl+G to toggle between Kannada and English