ಬಂಟ್ವಾಳ: ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಎಚ್.ಎನ್. ಅನಂತಕುಮಾರ್ ಅವರ ನಿಧನಕ್ಕೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಆನಂದ ಬಂಟ್ವಾಳ ಅವರು ಸಂತಾಪ ಸೂಚಿಸಿದ್ದಾರೆ.
ಇವರ ಅಕಾಲಿಕ ಮರಣ ಪಕ್ಷಕ್ಕೆ ತುಂಬಲಾರದ ನಷ್ಟ ವಾಗಿದೆ. ನನಗೆ ಅತೀವ ನೋವುಂಟು ಮಾಡಿದೆ ಎಂದು ಜಿ.ಆನಂದ ಅವರು ತಿಳಿಸಿದ್ದಾರೆ.
ಬಂಟ್ವಾಳ ಕ್ಕೂ ಅನಂತ್ ಕುಮಾರ್ ಅವರಿಗೂ ಹಳೆಯ ಸಂಬಂಧ ವಿದೆ. 1983 ರಲ್ಲಿ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ಯಾಗಿ ಅಯ್ಕೆ ಯಾದ ಸಂದರ್ಭದಲ್ಲಿ ಇವರು ಬಂಟ್ವಾಳ ಕ್ಕೆ ಆಗಮಿಸಿ ಸಂಘಟನೆಯನ್ನು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ 1986 ರಲ್ಲಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದಗಲೂ ಬಂಟ್ವಾಳಕ್ಕೆ ಆಗಮಿಸಿ ಬಂಟ್ವಾಳ ಕ್ಷೇತ್ರದ್ಯಾದಂತ ಸಂಚರಿಸಿ ಯುವಕರಿಗೆ ಸಂಚಲನ ಮೂಡಿಸಿದ್ದರು.
ಅ ಸಂಧರ್ಭದಲ್ಲಿ ಜಿ.ಆನಂದ ಅವರು ಬಂಟ್ವಾಳ ಸಂಘಟನಾ ಕಾರ್ಯದರ್ಶಿ ಯಾಗಿ ದ್ದರು. ಅನಂತ ಕುಮಾರ್ ಅವರ ಒಡನಾಡಿಯಾಗಿ ಜಿ.ಆನಂದ ಅವರು ಬಹಳ ವರ್ಷಗಳ ಕಾಲ ಜೊತೆಯಾಗಿದ್ದವರು. ಬಂಟ್ವಾಳ ಕ್ಕೆ ಪ್ರತಿ ಬಾರಿ ಬಂದಾಗಲೂ ಆನಂದ ಅವರನ್ನು ಮಾತನಾಡಿಸದೆ ಹೋಗಲಿಲ್ಲ ಎಂದು ಅವರು ನೆನಪು ಮಾಡಿಕೊಂಡರು. ಇದೀಗ ಅವರ ನೆನಪು ಕಾಡುತ್ತಿದೆ ಎಂದು ಅವರು ಹೇಳಿದರು.
Click this button or press Ctrl+G to toggle between Kannada and English