ಮುಂಬೈ: ಅದೇಷ್ಟೊ ಜನ ಕ್ಯಾನ್ಸರ್ಗೆ ಬಲಿ ಆಗಿದ್ದಾರೆ. ಅಷ್ಟೇ ಏಕೆ ಇಂದು ಕೇಂದ್ರ ಸಚಿವ ಅನಂತಕುಮಾರ್ರನ್ನು ಬಲಿ ಪಡೆದಿದ್ದು ಈ ಮಹಾಮಾರಿ ರೋಗವೇ. ಇನ್ನು ಕೆಲ ಅದೃಷ್ಟವಂತರು ಅದೇ ಕ್ಯಾನ್ಸರ್ನಿಂದ ನರಳಿ ಹೊರ ಬಂದಿದ್ದಾರೆ. ಆ ಲಿಸ್ಟ್ನಲ್ಲಿ ಯುವರಾಜ್ ಸಿಂಗ್, ಮನಿಷಾ ಕೊಯಿರಾಲ್ ಸಹ ಇದ್ದಾರೆ.
ಹೌದು, ಪ್ರಮುಖ ನಟಿ ಮನಿಶಾ ಕೊಯಿರಾಲಾ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಆ ರೋಗಕ್ಕೆ ನರಳಿದ್ದರು. ಈಗ ಅವರು ಆರೋಗ್ಯದಿಂದ ಹೊರ ಬಂದು ಆರು ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ಅವರು ಪುಸ್ತಕವೊಂದನ್ನು ಬಿಡುಗಡೆ ಮಾಡಿದ್ದಾರೆ.
ಕ್ಯಾನ್ಸರ್ ನನ್ನ ಜೀವನವನ್ನು ಹೇಗೆ ಬದಲಾಯಿಸಿತು ಎಂದು ವಿವರಿಸುತ್ತಾ ಪುಸ್ತಕವೊಂದನ್ನು ಬರೆದಿದ್ದಾರೆ ನಟಿ ಮನಿಷಾ. ಆ ಪುಸ್ತಕಕ್ಕೆ ‘HEALED: How cancer gave me a new life’ ಎಂದು ಟೈಟಲ್ ಇಟ್ಟಿದ್ದಾರೆ. ಇನ್ನು ಈ ಪುಸ್ತಕವನ್ನು ಮನಿಷಾ ಮುಂಬೈನಲ್ಲಿ ಬಿಡುಗಡೆ ಮಾಡಿದ್ದಾರೆ. ಇದನ್ನು ಮನಿಷಾ ಪ್ರಮುಖ ರಚನಾಗಾರ್ತಿ ನಿಲಮ್ ಕುಮಾರ್ ಸಹಾಯದಿಂದ ಬರೆದಿದ್ದಾರೆ.
‘ಕ್ಯಾನ್ಸರ್ ಜೊತೆ ಹೋರಾಟ ನಡೆಸಿರುವುದು ನನಗೆ ಗುಣಪಾಠವಾಗಿದೆ. ಕ್ಯಾನ್ಸರ್ ನನಗೆ ಜೀವನದಲ್ಲಿ ಕಠಿಣವಾದ ಪಾಠ ಕಲಿಸಿತು. ಹೇಳಬೇಕಂದ್ರೆ ಕ್ಯಾನ್ಸರ್ ನನಗೆ ಹೊಸ ಗಿಫ್ಟ್ ನೀಡಿದೆ. ಆದ್ರೆ ಈ ಗಿಫ್ಟ್ ಮತ್ತೊಬ್ಬರಿಗೆ ಬಾರದಿರುವುದೇ ಒಳ್ಳೆದು. ಕ್ಯಾನ್ಸರ್ ಜೊತೆ ನನ್ನ ಜೀವನ ಪ್ರಯಾಣವನ್ನು ಈ ಪುಸ್ತಕದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತಿದ್ದೇನೆ’ ಎಂದು ಮನಿಷಾ ಟ್ವೀಟ್ ಮಾಡಿದ್ದಾರೆ.
ಮನಿಷಾ ಕೊಯಿರಾಲಾ ಕ್ಯಾನ್ಸರ್ಗೆ ಗುರಿಯಾಗಿದ್ದ ತಕ್ಷಣವೇ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. ಅವರು ಸಂಪೂರ್ಣ ಗುಣಮುಖರಾಗುವವರೆಗೂ ಅಮೆರಿಕಾದಲ್ಲೇ ವಾಸ್ತವ್ಯ ಹೂಡಿದ್ದರು.
Click this button or press Ctrl+G to toggle between Kannada and English