ಮೊಟ್ಟೆ ಸೇವನೆಯ ಕುರಿತು ತಪ್ಪು ನಂಬಿಕೆಗಳಿವೆ… ಅವು ಯಾವವು ಗೊತ್ತಾ?

4:17 PM, Monday, November 12th, 2018
Share
1 Star2 Stars3 Stars4 Stars5 Stars
(No Ratings Yet)
Loading...

eggಚಳಿಗಾಲದ ಸಂದರ್ಭದಲ್ಲಿ ನಿತ್ಯ ಒಂದು ಮೊಟ್ಟೆ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭವಿದೆ. ಇದು ಇಮ್ಯುನಿಟಿಯನ್ನು ಹೆಚ್ಚಿಸುವುದರ ಜೊತೆಗೆ , ಚಳಿಯಿಂದ ದೇಹವನ್ನು ಕಾಪಾಡುತ್ತದೆ.

ಆದರೆ ಕೆಲವರಲ್ಲಿ ಮೊಟ್ಟೆ ಸೇವನೆಯ ಕುರಿತು ತಪ್ಪು ನಂಬಿಕೆಗಳಿವೆ. ಅವು ಯಾವವು ಗೊತ್ತಾ?

ಮೊಟ್ಟೆ ತಿನ್ನುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಹಾಗಾಗಿ ದಪ್ಪವಿರುವವರು ಮೊಟ್ಟೆ ಸೇವಿಸಬಾರದು. ಆದರೆ, ಮೊಟ್ಟೆಯಲ್ಲಿ ಪ್ರೊಟೀನ್ ಅಂಶವಿರುವುದರಿಂದ ಇದು ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ ಎಂಬುದು ನಿಮಗೆ ಗೊತ್ತಿರುವುದು ಅವಶ್ಯಕ.

ಒಂದಕ್ಕಿಂತ ಹೆಚ್ಚು ಮೊಟ್ಟೆಯನ್ನು ಸೇವಿಸಬಾರದು ಎಂಬ ತಪ್ಪು ನಂಬಿಕೆಯೂ ಹಲವರಲ್ಲಿದೆ. ಆದರೆ, ದಿನಕ್ಕೆ 3 ಮೊಟ್ಟೆಯವರೆಗೆ ಸೇವನೆ ಮಾಡಿದರೂ ಯಾವುದೇ ಸಮಸ್ಯೆ ಇಲ್ಲ. ಹಾಗೂ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.

ಮೊಟ್ಟೆ ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆ ಉಂಟಾಗುತ್ತದೆ, ಎಂಬುದು ತಪ್ಪು ನಂಬಿಕೆ. ದಿನಕ್ಕೊಂದು ಮೊಟ್ಟೆ ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.

ಆರೋಗ್ಯಕ್ಕೆ ಬಿಳಿ ಮೊಟ್ಟೆ ಮಾತ್ರ ಉತ್ತಮ ಎಂಬ ನಂಬಿಕೆ ಇದೆ. ಆದರೆ, ಇದು ತಪ್ಪು. ಮೊಟ್ಟೆಯಲ್ಲಿರುವ ಗುಣಗಳು ಬಣ್ಣದ ಮೇಲೆ ಅವಲಂಬಿತವಾಗಿರುವುದಿಲ್ಲ , ಬಿಳಿ ಮತ್ತು ಕಂದು ಬಣ್ಣದ ಮೊಟ್ಟೆ ಎರಡೂ ಆರೋಗ್ಯಕ್ಕೆ ಒಳ್ಳೆಯದು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English