ಮಂಗಳೂರು: ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಆರಂಭಗೊಂಡ ಆಂದೋಲನ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು, ಕೋಟ್ಯಂತರ ರಾಮ ಭಕ್ತರು ಅಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ನ ಅಧ್ಯಕ್ಷ ಎಂ.ಬಿ.ಪುರಾಣಿಕ್ ಇಂದು ನಗರದ ವಿಶ್ವಶ್ರೀ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೇಳಿದರು.
ಕೇಂದ್ರ ಸರಕಾರ ಹಾಗೂ ಸಾಧುಸಂತರು ಈ ರಾಮಜನ್ಮ ಭೂಮಿಯ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ವಿಶ್ವಹಿಂದು ಪರಿಷತ್ಗೆ ಕೊಡಬೇಕೆಂದು ನಿರ್ಧಾರ ಕೈಗೊಂಡಿತು. ಆ ನಂತರ ವಿಶ್ವಹಿಂದು ಪರಿಷತ್ ರಾಮಜನ್ಮ ಭೂಮಿ ನ್ಯಾಸ್ ಸಂಸ್ಥೆಯನ್ನು ನಿರ್ಮಾಣ ಮಾಡಿ ಅನಂತರ ಭವ್ಯವಾದ ರಾಮಮಂದಿರದ ಸ್ಕೆಚ್ ಅನ್ನು ಮಾಡಿತು. ಬಳಿಕ ರಾಮಮಂದಿರ ನಿರ್ಮಾಣ ಮಾಡಲು ಅಯೋಧ್ಯೆಯಲ್ಲಿ ಭೂಮಿ ಪೂಜೆಯನ್ನು ಮಾಡಿ, ಮಂದಿರ ನಿರ್ಮಾಣ ಮಾಡಲು ಕೇಂದ್ರ ಸರಕಾರದ ಅನುಮತಿಯನ್ನು ಕೇಳಿತು. ಕೇಂದ್ರ ಸರಕಾರ ಇದು ತನ್ನ ಕೈಗೆ ಮೀರಿದ್ದು, ಇದು ಅಲಹಾಬಾದ್ ಹೈಕೋರ್ಟ್ ನ ವ್ಯಾಪ್ತಿಗೆ ಬರುವಂತಹ ವಿಚಾರ ಎಂದು ಹೇಳಿತು.
ಅಲಹಾಬಾದ್ ಹೈಕೋರ್ಟ್, ಬಾಬರಿ ಮಸೀದಿ ನಿರ್ಮಾಣ ಸಮಿತಿ, ರಾಮಜನ್ಮಭೂಮಿ ನಿರ್ಮಾಣ ಸಮಿತಿ ಸೇರಿ ವ್ಯಾಜ್ಯವನ್ನು ಮಾಡಿದಾಗ ಸ್ಪಷ್ಟವಾಗಿ ತಿಳಿದು ಬಂದಿದ್ದು ಆ ಜಾಗದಲ್ಲಿ ರಾಮಮಂದಿರ ಇತ್ತು ಎಂದು ಅವರು ಹೇಳಿದರು.
ಪ್ರಸ್ತುತ ಈ ರಾಮಜನ್ಮ ಭೂಮಿ ವಿಚಾರ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು, ತೀರ್ಪು ಇನ್ನೂ ಬಂದಿಲ್ಲ. ಇದರಿಂದಾಗಿ ರಾಮಜನ್ಮ ಭೂಮಿ ನಿರ್ಮಾಣ ಪ್ರಕ್ರಿಯೆ ತಡವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜನಾಗ್ರಹ ಸಭೆಯನ್ನು ನಡೆಸಬೇಕೆಂದು ಸಾಧು ಸಂತರ ಸಮಿತಿಯು ನಿರ್ಧರಿಸಿದ್ದು, ನ.25 ರಂದು ಸಂಜೆ 4ಗಂಟೆಗೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಸಾಧು ಸಂತರ ನೇತೃತ್ವದಲ್ಲಿ ಬೃಹತ್ ಜನಾಗ್ರಹ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ವಿಶ್ವಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ವಿಶ್ವಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಪ್ರವೀಣ್ ಕುತ್ತಾರ್, ಗೋಪಾಲ್ ಕುತ್ತಾರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English