ಮೈಸೂರು: ಪ್ರವಾಹದಿಂದ ತತ್ತರಿಸಿರುವ ಕೊಡಗಿಗೆ ತಮಿಳುನಾಡು ಸರ್ಕಾರ ಕೂಡ ಪರಿಹಾರ ಕೊಡಬೇಕು ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಪ್ರತಿಪಾದಿಸಿದ್ದಾರೆ.
ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡಗಿನಿಂದ ಕಾವೇರಿ ನೀರು ಹೋಗಲಿಲ್ಲವೆಂದರೆ, ತಮಿಳುನಾಡು ಸರ್ಕಾರ ಕಾವೇರಿ ನೀರು ಬಂದಿಲ್ಲವೆಂದು ಸುಪ್ರೀಂಕೋರ್ಟ್ ಮೊರೆಹೋಗುತ್ತದೆ. ಸದ್ಯ ಕೊಡುಗಿನಲ್ಲಿ ಭೀಕರ ಪ್ರವಾಹವಾಗಿದ್ದು, ಇಲ್ಲಿಂದ ನೀರು ಪಡೆಯಲು ಹಠಕ್ಕೆ ಬೀಳುವ ತಮಿಳುನಾಡಿಗೆ ಕೊಡುಗಿನ ಮೇಲೆ ಮಾನವೀಯತೆ ಬಂದಿದಿಯಾ? ಎಂದು ಪ್ರಶ್ನಿಸಿದರು.
ನೀರು ಇಲ್ಲದೇ ಹೋದರೂ, ನೀರು ಕೇಳುವ ತಮಿಳುನಾಡಿಗೆ ಕೊಡುಗಿನಲ್ಲಿ ಸುರಿದ ಭಾರಿ ಮಳೆ ಬೇಕಾದಷ್ಟು ನೀರು ಕೊಟ್ಟಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿ, ತಮಿಳುನಾಡು ಸರ್ಕಾರದಿಂದ ಪರಿಹಾರ ಪಡೆಯಬೇಕು ಎಂದರು.
Click this button or press Ctrl+G to toggle between Kannada and English