ಬಂಧಿಸಲು ಹೋದಾಗ ಹಲ್ಲೆಗೆ ಯತ್ನ: ಪೊಲೀಸರಿಂದ ಫೈರಿಂಗ್​..!

12:22 PM, Wednesday, November 14th, 2018
Share
1 Star2 Stars3 Stars4 Stars5 Stars
(No Ratings Yet)
Loading...

arrestedಬೆಂಗಳೂರು: ಕುಖ್ಯಾತ ಕಳ್ಳ ದಿನೇಶ್ ದೋರಾ ಎಂಬಾತನ ಮೇಲೆ ನಿನ್ನೆ ತಡರಾತ್ರಿ 12ರ ವೇಳೆಗೆ ಬಾಣಸವಾಡಿ ಪೊಲೀಸರು ಗುಂಡು ಹಾರಿಸಿದ್ದಾರೆ.

ಆರೋಪಿ ದಿನೇಶ್ ದೋರಾ ಇಂದಿರಾನಗರ, ಡಿಜೆಹಳ್ಳಿ ,ಹೆಣ್ಣೂರು, ಜೆಸಿನಗರ, ಬಸವೇಶ್ವರ ನಗರ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ 12 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕಳ್ಳತನ ಮಾಡಿ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಈತ ಕೆ.ಜಿ. ಹಳ್ಳಿಯ ಹೆಚ್ಬಿಆರ್ ಲೇಔಟ್ನಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಆರೋಪಿಯನ್ನ ಬಂಧಿಸಲು ಬಾಣಸವಾಡಿ ಪೊಲೀಸರು ತೆರಳಿದ್ದರು.

ಆರೋಪಿಯನ್ನ ಬಂಧಿಸುವ ವೇಳೆ ಬಾಣಸವಾಡಿ ಪೇದೆ ಮೂರ್ತಿ ಮೇಲೆ ಆರೋಪಿ ರಾಡ್, ಸ್ಕ್ರೂ ಡ್ರೈವರ್ ಮತ್ತು ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗೆ ಬಾಣಸವಾಡಿ ಇನ್ಸ್ ಪೆಕ್ಟರ್ ವಿರೂಪಾಕ್ಷ ಅವರು ಆರೋಪಿ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಸದ್ಯ ಪೇದೆ ಮೂರ್ತಿ ಮತ್ತು ಆರೋಪಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English