ಮಂಗಳೂರು ಪಾಲಿಕೆ : ವಿರೋಧ ಪಕ್ಷಕ್ಕೆ ಮೇಯರ್, ಆಡಳಿತ ಪಕ್ಷಕ್ಕೆ ಉಪಮೇಯರ್

1:27 PM, Thursday, March 8th, 2012
Share
1 Star2 Stars3 Stars4 Stars5 Stars
(4 rating, 1 votes)
Loading...

Mayor GulZar

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 5ನೇ ಅವಧಿಯ ಕೊನೆಯ ಮೇಯರ್‌ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗುಲ್ಜಾರ್‌ ಬಾನು ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ, ಪಾಲಿಕೆಯಲ್ಲಿ ಬಹುಮತವಿರುವ ಬಿಜೆಪಿ ಅಭ್ಯರ್ಥಿ ಇದ್ದರೂ ವಿರೋಧ ಪಕ್ಷದ ಅಭ್ಯರ್ಥಿಯೊಬ್ಬರು ಮೇಯರ್ ಆಗಿರುವುದು ಅಚ್ಚರಿ ಮೂಡಿಸಿತು.

ರೂಪಾ ಡಿ. ಬಂಗೇರ ಅವರು ಆಡಳಿತ ಪಕ್ಷ ಬಿಜೆಪಿಯ ಮೇಯರ್ ಅಭ್ಯರ್ಥಿಯಾಗಿದ್ದರು. ಅವರು ಮೀಸಲಾತಿಗೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರವನ್ನು ಸರಿಯಾಗಿ ಹಾಜರು ಪಡಿಸಿಲ್ಲ ಎಂಬ ನೆಪಯೊಡ್ಡಿ ಅವರ ನಾಮ ಪತ್ರವನ್ನು ತಿರಷ್ಕರಿಸಲಾಯಿತು. ಆಡಳಿತ ಪಕ್ಷ ಮಾಡಿದ ಇನ್ನೊಂದು ತಪ್ಪು ಡಮ್ಮಿ ಅಭ್ಯರ್ಥಿಯ ನಾಮಪತ್ರ ಸಲ್ಲಿಸದಿರುವುದು. ಇದರಿಂದ ಕಾಂಗ್ರೆಸ್‌ ಅಭ್ಯರ್ಥಿ ಮೇಯರ್‌ ಆಗಿ ಆಯ್ಕೆಯಾಗಲು ಸಾಧ್ಯವಾಯಿತು. ಪ್ರತಿಪಕ್ಷದ ಅಭ್ಯರ್ಥಿಯೊಬ್ಬರು ಮೇಯರ್‌ ಆಗಿ ಆಯ್ಕೆಯಾಗುತ್ತಿರುವುದು ಪಾಲಿಕೆಯ ಇತಿಹಾಸದಲ್ಲಿಯೇ ಪ್ರಥಮ.

Dy Mayor

ರೂಪಾ ಡಿ. ಬಂಗೇರ ಅವರು ಜಾತಿ ಪ್ರಮಾಣ ಪತ್ರವನ್ನು ನಾಮಪತ್ರದ ಜತೆಗೆ ಸಲ್ಲಿಸಿದ್ದರು; ಆದರೆ ಅದರ ನಮೂನೆ ಬೇರೆಯಾಗಿತ್ತು. ಆದಾಯ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ನಮೂನೆ ಅದಾಗಿತ್ತು. ಆಡಳಿತ ಪಕ್ಷ ಬಿಜೆಪಿಯಿಂದ ರೂಪಾ ಡಿ. ಬಂಗೇರ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಮೀಸಲು ಸ್ಥಾನ ಆಗಿದ್ದ ಕಾರಣ ನಾಮಪತ್ರದ ಜತೆಗೆ ಜಾತಿ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ ಮಾಡಲಾಗಿತ್ತು.

ರೂಪಾ ಅವರ ಜತೆಗೆ ಇನ್ನೋರ್ವ ಡಮ್ಮಿ ಅಭ್ಯರ್ಥಿ ಕೂಡಾ ನಾಮಪತ್ರ ಹಾಕಿದ್ದರೆ ಮೇಯರ್‌ ಹುದ್ದೆಯನ್ನು ಬಿಜೆಪಿ ಉಳಿಸಿಕೊಳ್ಳಬಹುದಿತ್ತು. ಅದನ್ನೂ ಬಿಜೆಪಿ ಮಾಡಿಲ್ಲ. ಪಾಲಿಕೆಯ ಇದುವರೆಗಿನ ಇತಿಹಾಸದಲ್ಲಿ ಎಲ್ಲಾ ಮೇಯರ್‌ ಚುನಾವಣೆ ಸಂದರ್ಭದಲ್ಲಿ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಈ ಬಾರಿ ಮಾತ್ರ ಡಮ್ಮಿ ಅಭ್ಯರ್ಥಿಯನ್ನು ಹಾಕಿಲ್ಲ.

‘ಕಳೆದ ವರ್ಷ ಪ್ರವೀಣ್‌ ಅವರು ಮೇಯರ್‌ ಆಗಿ ಆಯ್ಕೆ ಆಗುವ ಸಂದರ್ಭದಲ್ಲಿಯೂ ಇದೇ ರೀತಿ ಆದಾಯ ವಿವರಕ್ಕೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರವನ್ನು ನಾಮಪತ್ರದ ಜತೆ ಸಲ್ಲಿಸಲಾಗಿತ್ತು, ಪ್ರತಿಪಕ್ಷದವರು ಅದು ಸರಿಯಾದ ನಮೂನೆ ಅಲ್ಲ ಎಂದು ಹೇಳಿ ತಿದ್ದಿಗೊಳ್ಳುವಂತೆ ಸಲಹೆ ಮಾಡಿದ್ದರು .

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English